ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

Share the Article

ಬೆಳಗಾವಿ:ನಗರಕ್ಕೆ ಬಂದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವತಿಯನ್ನು ಮೂಲತಃ ವಿಜಯಪುರ ಶ್ರೀ ಶೈಲ ಯಮನಪ್ಪ ಹಿಕ್ಕಡಿ ಎಂಬವರ ಪುತ್ರಿ ಜ್ಯೋತಿ ಶ್ರೀ ಶೈಲ ಹಿಕ್ಕಡಿ(20)ಎಂದು ಗುರುತಿಸಲಾಗಿದೆ.ಈಕೆ ಕಳೆದ 15 ದಿನಗಳಿಂದ ಬೆಳಗಾವಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ಬಂದಿದ್ದು, ಬಳಿಕ ಮನೆಯಿಂದ ಹೇಳದೆ ಕೇಳದೆ ನಾಪತ್ತೆಯಾಗಿದ್ದಾಳೆ.

ಸದ್ಯ ಈ ಬಗ್ಗೆ ಮನೆ ಮಂದಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಯುವತಿಯ ಪತ್ತೆಗೆ ಮನವಿ ಮಾಡಲಾಗಿದೆ.ಯುವತಿಯು ದ್ವಿತೀಯ ಪಿಯುಸಿ ಕಲಿತಿದ್ದು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಿದ್ದು, ಈಕೆಯ ಬಗ್ಗೆ ಗುರುತು ಪತ್ತೆಯಾದಲ್ಲಿ ನಗರ ಕಂಟ್ರೋಲ್ ರೂಮ್ 0831-2405233 ಅಥವಾ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave A Reply