‘ಆಸ್ತಿ ಖರೀದಿದಾರ’ರಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿಯನ್ನು ಮತ್ತಷ್ಟು ಸುಲಭ ಹಾಗೂ ಸರಳೀಕರಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿಯೇ ನವೆಂಬರ್ 1, 2022ರಿಂದ ಹೊಸ ಸೌಲಭ್ಯ ಜಾರಿಗೊಳಿಸಲಾಗುತ್ತಿದೆ. ಈ ಸೇವೆಯ ಆರಂಭದಿಂದಾಗಿ ಇನ್ಮುಂದೆ ಜಸ್ಟ್ 20 ನಿಮಿಷದಲ್ಲಿ ಆಸ್ತಿ ಖರೀದಿದಾರರಿಗೆ ಆಸ್ತಿಯ ನೋಂದಣಿ ಆಗಲಿದೆ.

ಹೌದು, ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿನ ಅಡೆತಡೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಾಸ್ ಪೋರ್ಟ್ ಕಚೇರಿ ಮಾದರಿಯ ಸೇವೆ ಒದಗಿಸುವತ್ತ ಇದೀಗ ಹೊಸ ಹೆಜ್ಜೆಯನ್ನು ಇಟ್ಟಿದೆ. ಈ ಸಲುವಾಗಿಯೇ ಆಸ್ತಿಗಳ ಸುಲಭ ನೋಂದಣಿಗಾಗಿ ವೆಬ್ ಆಧಾರಿತ ಕಾರ್ಯನಿರ್ವಹಣೆಯ ನಾಗರಿಕ ಸ್ನೇಹಿ ಕಾವೇರಿ-2 ತಂತ್ರಾಂಶ ರೂಪಿಸಿದೆ.

ಈ ತಂತ್ರಾಂಶ ನವೆಂಬರ್ 1, 2022ರಿಂದಲೇ ಆಸ್ತಿ ನೋಂದಣಿ ಸೌಲಭ್ಯ ಆರಂಭಗೊಳ್ಳಲಿದೆ. ಹೊಸ ಸೌಲಭ್ಯದಂತೆ ನಾಗರಿಕರು ತಮಗೆ ಅನುಕೂಲವಾಗುವ ನೋಂದಣಿ ದಿನ, ಸಮಯ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗೆ ಆಯ್ಕೆ ಮಾಡಿಕೊಂಡು ನೋಂದಣಿ ಕಚೇರಿಗೆ ಆಗಮಿಸಿದಂತ 20 ನಿಮಿಷದೊಳಗೆ ಎಲ್ಲಾ ಪ್ರಕ್ರಿಯೆಗಳೂ ಪೂರ್ಣಗೊಂಡು, ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೆಚ್ಚುವರಿ ಆಯುಕ್ತ ಹೆಚ್ ಎಲ್ ಪ್ರಭಾಕರ್ ಅವರು, ಇದುವರೆಗೆ ನೋಂದಣಿ ಬಯಸುವವರು ಎಲ್ಲಾ ದಾಖಲೆಗಳನ್ನು ನೀಡಿ, ಶುಲ್ಕ ಪಾವತಿಸಿದ ನಂತ್ರವೂ ವಾರಗಟ್ಟಲೇ ನೋಂದಣಿಗಾಗಿ ಕಾಯಬೇಕಾಗಿತ್ತು. ಇಲಾಖೆಯಿಂದ ನೀಡಿದಂತ ಟೋಕನ್ ನಂತೆ ನೋಂದಣಿ ಮಾಡಿಸಬೇಕಿತ್ತು. ಈ ಪದ್ಧತಿ ಹೊಸ ತಂತ್ರಾಂಶ ಆರಂಭದ ಬಳಿಕ ತಪ್ಪಲಿದೆ ಎಂದಿದ್ದಾರೆ.

Leave A Reply

Your email address will not be published.