ಈಗ ಪೋಲಿಸರ ಮೇಲೆಯೇ ಅಟ್ಯಾಕ್ | ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕು ಇರಿತ

ರಕ್ಷಣೆಗೆಂದು ಇರುವ ಪೊಲೀಸ್ ಗಳನ್ನೇ ಎದುರುಹಾಕಿಕೊಂಡು ಮುಟ್ಟುಗೋಲು ಹಾಕುವ ಅದೆಷ್ಟೋ ಕೆಲಸಗಳು ನಡೆಯುತ್ತಲೇ ಇದೆ. ಕ್ರಿಮಿನಲ್ ಗಳ ಮಧ್ಯೆ ಪೊಲೀಸರಿಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ರೌಡಿ ಶೀಟರ್ ಒಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ರೌಡಿ ಶೀಟರ್ ಶೇಕ್ ಶರೀಫ್ ಆಲಿಯಾಸ್ ಶರೀಫ್ (25) ಎಂಬಾತ HAL ಠಾಣೆಯ ಮಹಿಳಾ ಹೆಡ್ ಕಾನ್ ಸ್ಟೇಬಲ್ ವಿನುತಾ ಎಂಬುವರಿಗೆ ಚಾಕುವಿನಿಂದ ಇರಿದಿರೋದಾಗಿ ತಿಳಿದು ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಬೆಂಗಳೂರಿನ ಹೆಚ್ ಎಎಲ್ ಬಳಿಯ ಜ್ಯೋತಿ ನಗರದಲ್ಲಿ ಇಂದು ಈ ಘಟನೆ ನಡೆದಿದ್ದು, ಚಾಕುವಿನಿಂದ ಇರಿದ ಬಳಿಕ ರೌಡಿ ಶೀಟರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಕು ಇರಿತಕ್ಕೆ ಒಳಗಾದಂತ ಮಹಿಳಾ ಹೆಡ್ ಕಾನ್ ಸ್ಟೇಬಲ್ ವಿನುತಾರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಹೆಚ್ ಎಎಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಬೆಂಗಳೂರಿನ ಸಿಟಿ ಪೊಲೀಸರೇ ಬೆಚ್ಚಿ ಬೀಳುವಂತೆ ಆಗಿದೆ.

error: Content is protected !!
Scroll to Top
%d bloggers like this: