ಪ್ರವೀಣ್ ನೆಟ್ಟಾರು ಹತ್ಯೆ | ಪ್ರಮುಖ ಆರೋಪಿಗಳ ಹೆಡೆಮುರಿಕಟ್ಟಿದ್ದು ಇದೇ ತಂಡ !

ಸುಳ್ಯ : ಜುಲೈ 26. ದಕ್ಷಿಣ ಕನ್ನಡದಾದ್ಯಂತ ಕೋಲಾಹಲ ಎದ್ದ ದಿನ ಎಂದೇ ಹೇಳಬಹುದು. ಸುಳ್ಯ ಸಮೀಪದ ಬೆಳ್ಳಾರೆಯ ಬಿಜೆಪಿ ಮುಖಂಡರಾದ ಪ್ರವೀಣ್ ನೆಟ್ಟಾರು ಅವರನ್ನು ಅಂದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಅಂದು ಅಕ್ಷರಶಃ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದರು. ಇಂದಿಗೂ ಜನರಲ್ಲಿ ಆ ಅಮಾಯಕನ ಹತ್ಯೆಯ ನೋವು ಕಿಡಿ ಮನಸ್ಸಲ್ಲಿದೆ ಎಂದೇ ಹೇಳಬಹುದು.

ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಮುಖಂಡ ಹಾಗೂ ಕೋಳಿ ಉದ್ಯಮ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರ್ ರನ್ನು ಜುಲೈ 26 ರಂದು ರಾತ್ರಿ ಸುಮಾರು 8:40 ರ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ಮೂವರು ಹಂತಕರು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಎಬ್ಬಿಸಿತ್ತು. ಅದಲ್ಲದೇ ಸಿಎಂ ಆದಿಯಾಗಿ ಸಂಚಿವ ಸಂಪುಟದ ಮಂತ್ರಿಗಳು ಪ್ರವೀಣ್ ನೆಟ್ಟಾರು ಮನೆಗೆ ಬಂದು ಸಾಂತ್ವನ ಹೇಳಿದ್ದರು.

ಬಳಿಕ ಮನೆಮಂದಿ ಹಾಗೂ ಬಿಜೆಪಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ದಳ (NIA) ನೀಡಿತ್ತು. ಹತ್ಯೆಗೆ ಸಂಬಂಧಿಸಿದಂತೆ ಸಹಕರಿಸಿದ 7 ಜನರನ್ನು ಪೊಲೀಸರು ಬಂಧಿಸಿದ್ದರು. 16 ದಿನದ ಬಳಿಕ ಪ್ರಮುಖ ಮೂವರ ಬಂಧನವಾಗಿತ್ತು. ಪ್ರಕರಣದಲ್ಲಿ ಯಾರೆಲ್ಲಾ ಆರೋಪಿಗಳು ಭಾಗಿಯಾಗಿದ್ದಾರೆ ಅವರೆಲ್ಲ ಯಾವ ಜಾಗಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂಬ ಬಗ್ಗೆ ಹದಿನೈದು ದಿನ ಟೆಕ್ನಿಕಲ್ ಹಾಗೂ ಗ್ರೌಂಡ್ ವರ್ಕ್ ಮಾಡಿದ ಪ್ರಮುಖ 8 ಮಂದಿ ಪೊಲೀಸರ ಸಾಹಸ ಶ್ಲಾಘನೀಯ. ಗ್ರೌಂಡ್ ವರ್ಕ್ ಮಾಡಿದ ಪ್ರಮುಖ 8 ಮಂದಿ ಪೊಲೀಸರ ಸಾಹಸ ಶ್ಲಾಘನೀಯ. ಅವರು ಯಾರು ಎಂಬ ಕುತೂಹಲ ನಿಮಗೆ ಇರೋದು ಸಹಜ. ಇಲ್ಲಿದಾರ್ ನೋಡಿ, ಆ ರಿಯಲ್ ಲೈಫ್ ಬಾಹುಬಲಿಗಳು !!

ಈ ಒಂದು ಹತ್ಯೆ ಬಹುಶಃ ದಕ್ಷಿಣ ಕನ್ನಡದಾದ್ಯಂತ ಎಲ್ಲಾ ಹಿಂದೂ ಕಾರ್ಯಕರ್ತರನ್ನು ಎಚ್ಚೆತ್ತುವಂತೆ ಮಾಡಿದೆ. ಕಾರ್ಯಕರ್ತರು ನಲುಗಿಹೋಗಿದ್ದಾರೆ. ಬಹುಶಃ ಹಿಂದೂ ಕಾರ್ಯಕರ್ತರ ಆಕ್ರೋಶ ಹಾಗೂ ಪ್ರವೀಣ್ ನೆಟ್ಟಾರು ಅವರ ಮನೆಯವರ ಆಕ್ರಂದನ ಹತ್ಯೆಯ ಆರೋಪಿಗಳನ್ನು ಪೊಲೀಸರು ಶೀಘ್ರವೇ ಪತ್ತೆ ಹಚ್ಚುವಲ್ಲಿ ಸಫಲರಾಗುವಂತೆ ಮಾಡಿದೆ. ಅಂತಹ ಉತ್ಸಾಹಿ, ಧೀರ ಪೊಲೀಸರ ಕುರಿತು ಕಿರು ಸಾಹಸದ ಪರಿಚಯ ಇಲ್ಲಿದೆ.

ಈ ಹತ್ಯೆಯ ಹತ್ಯಾಕಾರರನ್ನು ಪತ್ತೆಹಚ್ಚಲು ಪ್ರಮುಖ ಪಾತ್ರ ವಹಿಸಿ ರಾತ್ರಿ ಹಗಲು ನಿದ್ದೆ ಬಿಟ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಹಂತಕರ ಹೆಡೆಮುರಿ ಕಟ್ಟಲು ಈ 8 ಪೊಲೀಸರೇ ಕಾರಣ. ಈ ಪೊಲೀಸರು ಬೆಲ್ಟ್ ಬಿಗಿಮಾಡಿಕೊಂಡು ಹಠಕ್ಕೆ ಬಿದ್ದು ಮನೆ ಬಿಟ್ಟರೆಂದರೆ ಅವರಿಗೆ ಹಸಿವೆಯ, ಸಮಯದ, ಯಾವುದೇ ಭಯದ ಗೊಡವೆಯಿಲ್ಲ. ಮನೆ, ಹೆಂಡತಿ, ಮಕ್ಕಳು ತಮ್ಮ ಪರಿವಾರ, ಹಬ್ಬ ಹರಿದಿನ ಅದು ಇದು- ನಮಗೆಲ್ಲ ಹೇಳಲು ಇರುವ ಯಾವುದೇ ಕಾರಣಗಳು ಅವರನ್ನು ತಾಕುವುದಿಲ್ಲ. ಅಂತಹಾ ಬಲಿಷ್ಠ ಕುಶಾಗ್ರಮತಿ ಬಾಹುಬಲಿಗಳ ತಂಡ ಮೊನ್ನೆ ಮಳೆ ಗಿಳೆ ಎನ್ನದೆ ಕೆಲಸ ಮಾಡಿದೆ. ಅದೇ ಕಾರಣಕ್ಕೆ ಭರ್ಜರಿ ಪ್ಲಾನ್ ಮಾಡಿ ಸಿಕ್ಕಿ ಬೀಳಬಾರದೆಂದೇ ತಂತ್ರ ರೂಪಿಸಿರುವ ಆರೋಪಿಗಳನ್ನೂ ಮುರಿದು, ಕಂಕುಳ ಕೆಳಕ್ಕೆ ಅದುಮಿ ಹಿಡಿದು ಎಳೆದು ಕೆಡವಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಉದಯ ರವಿ ನೇತೃತ್ವದ ವೇಣೂರು ಠಾಣೆಯ ಹೆಡ್ ಕಾನ್ ಸ್ಟೇಬಲ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಉದಯ ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್ ತಂಡದ ಎಂಟು ಮಂದಿ ಪ್ರಮುಖವಾಗಿ ಪ್ರಕರಣ ಆರೋಪಿಗಳ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿ ಉಳಿದ ಪೊಲೀಸರ ತಂಡವಾದ ಬಂಟ್ವಾಳ ಗ್ರಾಮಾಂತರ ಇಸ್ಪೆಕ್ಟರ್ ಟಿ.ಡಿ.ನಾಗರಾಜ್, ವಿಟ್ಲ ಇಸ್ಪೆಕ್ಟರ್‌ ನಾಗರಾಜ್.ಹೆಚ್, ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್, ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್,ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಹರೀಶ್,ಬಂಟ್ವಾಳ ನಗರ ಠಾಣಾ ಹೆಡ್ ಕಾನ್ ಸ್ಟೇಬಲ್ ಇರ್ಷಾದ್ ಪಡಂಗಡಿ ಇವರ ತಂಡಕ್ಕೆ ಮಾಹಿತಿ ನೀಡಿ ಹೆಡೆಮುರಿ ಕಟ್ಟಲು ಸಹಕರಿಸಿದ್ದಾರೆ. ಈ ತಂಡದಲ್ಲಿದ್ದ ಹಲವು ಪೊಲೀಸರು ಜಿಲ್ಲೆಯಲ್ಲಿ ನಡೆದ ಹಲವು ಗಂಭೀರ ಅಪರಾಧ ಕೃತ್ಯಗಳನ್ನು ಮಾಡಿದ ಆರೋಪಿಗಳನ್ನು ಭೇದಿಸಿದವರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ 6 ತಂಡವನ್ನು ರಚನೆ ಮಾಡಿ ಅದರಲ್ಲಿ 40 ಕ್ಕೂ ಹೆಚ್ಚು ಪೊಲೀಸರು ತನಿಖೆಯಲ್ಲಿ ಇದ್ದರು. ಇದೀಗ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಅಗಸ್ಟ್ 4 ರಂದು ಎಫ್‌ಐಆರ್ ದಾಖಲಿಸಿ ಬೆಳ್ಳಾರೆಗೆ ಅಗಮಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಂಡಕ್ಕೆಇದೇ ಏಂಟು ಪೊಲೀಸರು ತಂಡ ಸಹಕರಿಸಲಿದೆ. ಕರಾವಳಿಯ ಈ ಯುವ ಚಿರತೆಗಳ ತನಿಖಾ ವೇಗಕ್ಕೆ NIA ಅಂತಹಾ ದೊಡ್ಡ ಮಟ್ಟದ ಟ್ರೈನಿಂಗ್ ಪಡೆದು ಬಂದ ತಂಡವೇ ಶಹಬ್ಬಾಸ್ ಹೇಳಿದ ಸುದ್ದಿ ಇದೆ.

Leave A Reply