ತಂದೆಯ ಹುಟ್ಟು ಹಬ್ಬದ ನೆನಪಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಹಾಯಧನ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್

Share the Article

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್, ಕೇವಲ ಸಿನಿಮಾಗಳಿಂದ ಮಾತ್ರ ಗಮನ ಸೆಳೆಯುತ್ತಿಲ್ಲ. ಅವರ ಸಮಾಜಮುಖಿ ಕೆಲಸಗಳು ಕೂಡ ಅವರನ್ನು ಗೌರವದಿಂದ ಕಾಣುವಂತೆ ಮಾಡುತ್ತಿವೆ. ಸಿನಿಮಾಗಳಿಂದ ಪ್ರಶಾಂತ್ ಫೇಮಸ್ ಆಗಿದ್ದರೂ, ಇದೀಗ ಅವರು ತಾವು ಹುಟ್ಟಿದ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನ ಆಸ್ಪತ್ರೆಗೆ ಐವತ್ತು ಲಕ್ಷ ರೂಪಾಯಿಯನ್ನು ಕೊಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

ಪ್ರಶಾಂತ್ ನೀಲ್ ಮೂಲತಃ ಆಂಧ್ರ ಪ್ರದೇಶದ ನೀಲಕಂಠಪುರಂ ನವರು. ಅವರ ಪೂರ್ಣ ಹೆಸರು ಪ್ರಶಾಂತ್ ನೀಲಕಂಠಪುರಂ, ಅದನ್ನೇ ಅವರು ಪ್ರಶಾಂತ್ ನೀಲ್ ಅಂತ ಬದಲಾಯಿಸಿಕೊಂಡಿದ್ದಾರೆ. ಈ ಊರಿನಲ್ಲಿ ಕಣ್ಣಿಗೆ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು,ಅದಕ್ಕೆ ತಮ್ಮ ತಂದೆಯ 75ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲೇ 50 ಲಕ್ಷ ರೂಪಾಯಿಯನ್ನು ನೀಡಿದ್ದಾರೆ.

Leave A Reply