ಪ್ರತಿ ಲೀಟರ್‌ಗೆ 2 ರೂಪಾಯಿ ದರ ಹೆಚ್ಚಳ | ಗ್ರಾಹಕರಿಗೆ ಬರೆ ಎಳೆದ ಅಮುಲ್….

Share the Article

ಅಮುಲ್ ತನ್ನ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿದೆ. ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ದೆಹಲಿ-ಎನ್‍ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಮತ್ತು ಇತರ ಎಲ್ಲಾ ಮಾರುಕಟ್ಟೆಗಳಲ್ಲಿ ಆಗಸ್ಟ್ 17ರಿಂದ ಹೊಸ ಹಾಲಿನ ಬೆಲೆ ಜಾರಿಗೆ ಬರಲಿದೆ.

ಅಮುಲ್ ಗೋಲ್ಡ್ ಬೆಲೆ 500 ಎಂಎಲ್‍ಗೆ 31 ರೂ., ಅಮುಲ್ ತಾಜಾ 500 ಎಂಎಲ್‍ಗೆ 25 ರೂ., ಅಮುಲ್ ಶಕ್ತಿ 500 ಎಂಎಲ್‍ಗೆ 28 ರೂ. ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವಾಗಿದ್ದು, ಎಂಆರ್‌ಪಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರುಗಳ ಮೇವಿನ ವೆಚ್ಚವು ಸರಿಸುಮಾರು 20 ಪ್ರತಿಶತಕ್ಕೆ ಹೆಚ್ಚಾಗಿದೆ ಎಂದು ಅಮುಲ್ ಹೇಳಿದೆ. ಇನ್‍ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಪರಿಗಣಿಸಿ, ನಮ್ಮ ಸದಸ್ಯ ಒಕ್ಕೂಟಗಳು ಹಿಂದಿನ ವರ್ಷಕ್ಕಿಂತ 8-9 ಶೇಕಡಾ ವ್ಯಾಪ್ತಿಯಲ್ಲಿ ಬೆಲೆಗಳನ್ನು ಹೆಚ್ಚಿಸಿವೆ ಎಂದು ಅಮುಲ್ ಹೇಳಿಕೆಯಲ್ಲಿ ತಿಳಿಸಿದೆ.

Leave A Reply