ಮಂಗಳೂರಿನ ಯಾವುದೇ ರಸ್ತೆಗಳಲ್ಲಿ ಹೊಂಡ-ಗುಂಡಿ ಕಂಡು ಬಂದರೆ ಫೋಟೋ ತೆಗೆದು ಈ ನಂಬರ್ ಗೆ ವಾಟ್ಸಪ್ ಮಾಡಿ – ಮನಪಾ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆಗಳಲ್ಲಿ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹೊಂಡ ಗುಂಡಿಗಳು ಉಂಟಾಗಿದೆ. ಇದರ ಬಗ್ಗೆ ಹಾಗೂ ಅನಧಿಕೃತ ಅಗೆತದ ಬಗ್ಗೆ ದೂರುಗಳು ಇದ್ದಲ್ಲಿ ವಾಟ್ಸ್ಆ್ಯಪ್ ಸಂಖ್ಯೆ 9449007722 ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306 ಇಲ್ಲಿಗೆ ಸಲ್ಲಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ವಾರ್ಡ್ ಹಂತದಲ್ಲಿ ಸಂಬಂಧಪಟ್ಟ ವಾರ್ಡ್ ಎಂಜಿನಿಯರ್ ಸಂಪರ್ಕಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಇದೇ ಹೊಂಡ, ಗುಂಡಿಗಳ ಕಾರಣದಿಂದ ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಂಚಾಡಿಯ ಆತಿಶ್ ಸಾವಿಗೆ ನ್ಯಾಯಕ್ಕಾಗಿ ಅವರ ಸ್ನೇಹಿತ ಲಿಖಿತ್ ರೈ ಗುರುವಾರ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಪಾಲಿಕೆ, ಹೊಂಡ-ಗುಂಡಿಗಳ ಸಮಸ್ಯೆ ಇದ್ದರೆ ದೂರು ಸಲ್ಲಿಸಲು ಸಲಹೆ ನೀಡಿದೆ.

ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗಳ ದುರಸ್ತಿಗೆ ಕ್ರಮವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 24X7 ನೀರು ಸರಬರಾಜು ಯೋಜನೆ ಕಾಮಗಾರಿ, ಗೈಲ್ ಗ್ಯಾಸ್ ಕಂಪನಿಯ ಪೈಪ್‌ಲೈನ್ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ನಡೆದ ರಸ್ತೆಗಳ ಮರು ನಿರ್ಮಾಣವನ್ನು ಸಂಬಂಧಿಸಿದ ಇಲಾಖೆಯವರು ನಿರ್ವಹಿಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.15 ರಂದು ಪಿಲಿಕುಳ ಓಪನ್ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಆ.15ರಂದು ತೆರೆಯಲಾಗುವುದು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.