ರಾಖಿ ಕಟ್ಟಿದ ತಂಗಿಗೆ ನಟ ಯಶ್ ಕೊಟ್ಟ ಗಿಫ್ಟ್ ಏನು?

ಸ್ಯಾಂಡಲ್ ವುಡ್ ನ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಸಹೋದರಿ ಜೊತೆ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ. ಸಹೋದರಿ ನಂದಿನಿ ಜೊತೆ ರಾಖಿ ಹಬ್ಬವನ್ನು ನಟ ಯಶ್ ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ ರಾಖಿ ಕಟ್ಟಿ ಧನ್ಯತಾ ಭಾವ ಅನುಭವಿಸಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಸಹೋದರಿ ಪ್ರತಿ ವರ್ಷ ರಕ್ಷಬಂಧನ ಹಬ್ಬವನ್ನು ಆಚರಿಸುತ್ತಾರೆ.

ಯಶ್‌ ಗೆ ತಂಗಿ ನಂದಿನಿ ಪ್ರತಿವರ್ಷದಂತೆ ಈ ವರ್ಷ ಕೂಡಾ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅಂದ ಹಾಗೇ ಈ ವರ್ಷದ ರಾಖಿ ಹಬ್ಬ ಸೆಲೆಬ್ರೇಷನ್ ಫೋಟೋ ಭಾರೀ ವೈರಲ್ ಆಗುತ್ತಿದೆ. ಕೆಜಿಎಫ್ ಸ್ಟಾರ್ ಯಶ್‌ಗೆ ಸಹೋದರಿ ನಂದಿನಿ ರಾಖಿ ಕಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಯ ಸಹೋದರ ಯಶ್‌ಗೆ ಆರತಿ ಬೆಳಗಿ ತಿಲಕ ಇಟ್ಟು ರಾಖಿ ಕಟ್ಟಿದ್ದಾರೆ. ರಾಕಿಂಗ್ ಸಹೋದರಿಯ ರಾಖಿ ಹಬ್ಬದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಅಷ್ಟಕ್ಕೂ ನಟ ರಾಕಿ ಭಾಯ್ ಸಹೋದರಿಗೆ ಏನು ಗಿಫ್ಟ್ ಕೊಟ್ಟಿರಬಹುದು ಎಂದು ಯಶ್ ಅಭಿಮಾನಿಗಳಿಗೆ ಬಹಳಷ್ಟು ಕುತೂಹಲ ಇರಬಹುದು. ಅಂದಹಾಗೆ ಕೆಜಿಎಫ್ ಸ್ಟಾರ್ ತನ್ನ ಏಕೈಕ ಸಹೋದರಿಗೆ ಬೆಲೆಬಾಳುವ ಒಡವೆ ಗಿಫ್ಟ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

ಅಂದ ಹಾಗೆ ನಂದಿನಿ ಈಗ ಎರಡು ಮಕ್ಕಳ ತಾಯಿ. ನಂದಿನಿ ಕಂಡರೆ ಯಶ್‌ಗೆ ತುಂಬ ಇಷ್ಟ. ಕನಸಿನಂತೆ ತಂಗಿ ಮದುವೆಯನ್ನು ಯಶ್ ಅವರು ತುಂಬ ಜೋರಾಗಿ ಮಾಡಿದ್ದರು. ಪತಿ, ಮಕ್ಕಳ ಜೊತೆ ನಂದಿನಿ ಸದ್ಯ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಇನ್ನು ಯಥರ್ವ, ಆರ್ಯಾ ಕೂಡ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡಿದ್ದಾರೆ. ಹಿಂದಿನ ವರ್ಷ ಈ ಪುಟ್ಟ ಮಕ್ಕಳು ಹಬ್ಬ ಆಚರಿಸಿಕೊಂಡ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

‘ಒಡಹುಟ್ಟಿದವರು- ವಿಧಿ ಒಟ್ಟಿಗೆ ತಂದರೆ, ಪ್ರೀತಿ ಸಹಕಾರ ಜೀವನಪೂರ್ತಿ ಇರುವುದು. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು’ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್

Leave A Reply

Your email address will not be published.