ಬೆಳ್ತಂಗಡಿ | ಬಾಲಕಿ ಒಬ್ಬಳೇ ಇರುವಾಗ ಸಮಯ ಬಳಸಿಕೊಂಡು ಅತ್ಯಾಚಾರ, ಫೋಕ್ಸೋ ದಾಖಲು

ಮಂಗಳೂರು: ಮನೆಯಲ್ಲಿ ಬಾಲಕಿಯೋರ್ವಳು ಒಬ್ಬಳೇ ಇದ್ದ ಸಂದರ್ಭದಲ್ಲಿ ದೂರದ ಸಂಬಂಧಿಯೋರ್ವ ಮನೆಗೆ ಬಂದು, ಸಮಯದ ದುರುಪಯೋಗ ಮಾಡಿಕೊಂಡು, ಬಾಲಕಿಯ ಮೇಲೆ ಬಲವಂತವಾಗಿ ಬಲತ್ಕಾರ ಮಾಡಿದ ಘಟನೆಯೊಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಿ ಒಬ್ಬಂಟಿಯಾಗಿ ತನ್ನ ಮನೆಯಲ್ಲಿದ್ದ ವೇಳೆ ಆಕೆಯ ದೂರದ ಸಂಬಂಧಿ ಸದಾಶಿವ ಬಂದಿದ್ದಾನೆ. ನಂತರ ಈತ ಆಕೆ ಪುಟ್ಟ ಬಾಲಕಿ ಎಂದು ಕೂಡಾ ನೋಡದೇ, ಆ ಬಾಲೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯನ್ನು ಸದಾಶಿವ ಸವಣಾಲು ಎಂದು ಗುರುತಿಸಲಾಗಿದೆ.

ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಸಂಬಂಧಿ ಆರೋಪಿಯೋರ್ವ ಅತ್ಯಾಚಾರಗೈದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 376 ಐ.ಪಿ,ಸಿ ಮತ್ತು 3 & 4 ಪೋಕ್ಸ್ ಕಾಯ್ದೆ 2012ಯಂತೆ ಪ್ರಕರಣ ದಾಖಲಾಗಿದೆ.

Leave A Reply