‘ಮೂಕ ಜೀವಿಗಳೂ ಇಂತಹ ಆಹಾರ ತಿನ್ನೋದಿಲ್ಲ’ ಎಂದು ಮೆಸ್ ಊಟ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಪೊಲೀಸ್ ಪೇದೆ
ಪೊಲೀಸರು ಅಂದ್ರೆ ಹೊ, ಅವರಿಗೇನು ಹೊಟ್ಟೆ ತುಂಬಾ ಊಟ ಕೈ ತುಂಬಾ ಸಂಬಳ ಅನ್ನೋರು ಈ ವೀಡಿಯೊವನ್ನು ನೋಡಲೇ ಬೇಕಾಗಿದೆ. ಹೌದು. ಕಳಪೆ ಆಹಾರ ನೀಡುತ್ತಿರುವ ಪೊಲೀಸ್ ಮೆಸ್ ಕುರಿತು ಕಾನ್ಸ್ಟೇಬಲ್ ಓರ್ವರು ದುಃಖ ಹೊರ ಹಾಕಿದ್ದು, ಈ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.
ಇಂತಹ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಫಿರೋಜಾಬಾದ್ ಜಿಲ್ಲೆಯ ಮನೋಜ್ ಕುಮಾರ್ ಎಂಬ ಸ್ಥಳೀಯ ಕಾನ್ಸ್‌ಸ್ಟೇಬಲ್ ಒಬ್ಬರು ದುಃಖ ತಡೆಯದೇ ಎಲ್ಲರ ಮುಂದೆ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳು ನೀಡುತ್ತಿರುವ ಆಹಾರದ ಗುಣಮಟ್ಟವನ್ನ ಸರಿಯಾಗಿ ಪಾಲಿಸುತ್ತಿಲ್ಲ ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ.
ರಸ್ತೆಯಲ್ಲೇ ನಿಂತು ಪೊಲೀಸ್ ಮೆಸ್‌ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಹೇಳಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಮೂಕ ಜೀವಿಗಳೂ ಇಂತಹ ಆಹಾರವನ್ನ ತಿನ್ನುವುದಿಲ್ಲ. ಅಂತಹ ಆಹಾರ ನಮಗೆ ನೀಡುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಇಂತಹ ಆಹಾರವನ್ನು ನೀಡಿ, ಈ ಬಗ್ಗೆ ದೂರಿದ್ರೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿದ್ದಾರೆ. ಅಲ್ಲಿದ್ದ ನೌಕರರು ಮತ್ತು ಹಿರಿಯ ಅಧಿಕಾರಿಗಳು ಅವರನ್ನು ಸಂತೈಸಲು ಪ್ರಯತ್ನಿಸಿದರೂ, ಅವರಿಗೆ ದುಃಖ ತಡೆಯಲು ಸಾಧ್ಯವಾಗಿಲ್ಲ.
ಇದೀಗ ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಮೇಲಧಿಕಾರಿಗಳು ಪೂರ್ಣ ಪ್ರಮಾಣದ ತನಿಖೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.