ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ, ಆ.15 ರಂದು ಪ್ರಯಾಣಿಕರಿಗೆ 24 ಗಂಟೆ ಸಂಪೂರ್ಣ ಫ್ರೀ ಬಸ್ ಸಂಚಾರ

75ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ, ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಆಗಸ್ಟ್ 15 ರಂದು ಬಿಎಂಟಿಸಿ ಇಡೀ ದಿನ ಬೆಂಗಳೂರಿನಾದ್ಯಂತ ಉಚಿತ ಪ್ರಯಾಣ ನೀಡುವುದಾಗಿ ಘೋಷಣೆ ಮಾಡಿದೆ.

ಪ್ರಯಾಣಿಕರು 24 ಗಂಟೆಗಳ ಕಾಲ ಸಂಪೂರ್ಣ ಫ್ರೀ ಸಂಚಾರವನ್ನು ಪಡೆಯಬಹುದು. ವೋಲ್ವೋ ಸೇರಿ ಎಲ್ಲಾ ಬಿಎಂಟಿಸಿ ಬಸ್ನಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡಿದೆ. ಇದರಿಂದ ಬಿಎಂಟಿಸಿಗೆ 3 ಕೋಟಿ ಹೊರೆ ಬೀಳಲಿದೆ.

ಸರ್ಕಾರದ ಒಪ್ಪಿಗೆ ಕೊಟ್ಟ ಹಿನ್ನಲೆ ಉಚಿತ ಪ್ರಯಾಣದ ಘೋಷಣೆ ಮಾಡಲಾಗಿದೆ. ಅದೇ ರೀತಿಯಾಗಿ 75 ನೇ ಅಮೃತ ಮಹೋತ್ಸವ ಹಿನ್ನಲೆ ಆಗಸ್ಟ್ 14 ರಂದು 75 ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆ ಮಾಡಲಾಗುತ್ತಿದೆ. ಈಗಾಗಲೇ 90 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಈಗ ಅದರ ಜೊತೆಗೆ ಹೊಸ 75 ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗಿವೆ ಎಂದು ಬಿಎಂಟಿಸಿ ಘೋಷಣೆ ಮಾಡಿದೆ.

Leave A Reply