ಮಂಗಳೂರು | ನಾಳೆ ಬೃಹತ್ ಉದ್ಯೋಗ ಮೇಳ, ನಿಮ್ಮ ಕನಸಿನ ಕಂಪನಿಗಳೂ ಅಲ್ಲಿಗೆ ಬರ್ತಾವಾ, ಇಲ್ಲಿದೆ ನೋಡಿ ಆ ಲಿಸ್ಟ್ !

ಮಂಗಳೂರು: ಬಲ್ಮಠದಲ್ಲಿರುವ ಯೆನಪೋಯ ಪದವಿ ಕಾಲೇಜು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಶ್ರಯದಲ್ಲಿ ಸುಮಾರು 800 ಹುದ್ದೆಗಳ ಭರ್ತಿಗಾಗಿ ನಾಳೆ(ಆಗಸ್ಟ್ 12ರಂದು) ಬೆಳಿಗ್ಗೆ 10ರಿಂದ ಮಧ್ಯಾಹ್ನ 3:30 ರ ವರೆಗೆ ಯೆನಪೋಯ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಶರೀನಾ ಪಿ. ತಿಳಿಸಿದರು.


Ad Widget

ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲೋಮ, ಎ.ಎನ್.ಎಂ, ಜಿ.ಎನ್.ಎಂ, ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ, ಸೇರಿದಂತೆ ಪದವಿ, ಸ್ನಾತಕೋತ್ತರ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಸ್ವ-ವಿವರ ಸಹಿತ ನಿಖರ ದಾಖಲೆಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ವಿನ್ ಮನ್ ಸಾಫ್ಟ್ ವೆರ್ ಇಂಡಿಯಾ, ಎಲ್ಎಲ್ಫಿ, ದಿಯಾ ಸಿಸ್ಟಮ್ಸ್, ಈಶ ಮೋಟರ್ಸ್, ಎಕ್ಸ್ಪರ್ಟ್ ಸಮೂಹ ಸಂಸ್ಥೆ, ಇನ್ ವೆಂಜರ್ ಟೆಕ್ನಾಲಜಿಸ್, ಮೆಡ್ ಪ್ಲಸ್, ಕೆಫೆ ಕಾಫಿ ಡೇ, ಎಚ್.ಡಿ.ಎಫ್.ಸಿ ಬ್ಯಾಂಕ್ ಸೇರಿದಂತೆ ಸುಮಾರು 30 ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಉದ್ಯೋಗವಿಲ್ಲದೆ ಇರುವ ಅಭ್ಯರ್ಥಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ.

ಹೆಚ್ಚಿನ ಮಾಹಿತಿಗೆ:9108620123


Ad Widget
error: Content is protected !!
Scroll to Top
%d bloggers like this: