ಮಹಿಳೆ ‘ಸೆಕ್ಸ್’ ಬೇಕೆಂದು ಕೇಳಿದರೆ ಆಕೆ…. – ಶಕ್ತಿಮಾನ್ ನಟನ ವಿವಾದಾತ್ಮಕ ಹೇಳಿಕೆ

ಶಕ್ತಿಮಾನ್ ಮತ್ತು ಭೀಷ್ಮ ಪಿತಾಮಹನ ಪಾತ್ರ ನಿರ್ವಹಿಸಿ ಭಾರೀ ಜನಪ್ರಿಯತೆ ಗಳಿಸಿದ ಹಿರಿಯ ನಟ ಮುಖೇಶ್ ಖನ್ನಾ ಅವರ ಮಹಿಳೆಯರ ಬಗೆಗಿನ ಅಸಂಬದ್ಧ ಹೇಳಿಕೆ ನೆಟ್ಟಿಗರಿಗೆ ಕೋಪ ತರಿಸಿದೆ. ಇವರ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಖೇಶ್ ಖನ್ನಾ ಭೀಷ್ಮ್ ಇಂಟರ್ ನ್ಯಾಶನಲ್ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದು, “ಕ್ಯಾ ಆಪ್‌ಕೋ ಭಿ ಐಸಿ ಲಡ್ಡಿಯಾ ಲುಭಾತಿ ಹೈ?’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಒಂದನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಕ್ಲಿಪ್ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ಮುಖೇಶ್ ಖನ್ನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯಾವುದೇ ಒಬ್ಬ ಮಹಿಳೆ ಒಬ್ಬ ಪುರುಷನ ಬಳಿ ನಾನು ನಿನ್ನೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆಂದು ಹೇಳಿದರೆ ಆಕೆ ಸಾಮಾನ್ಯಳಲ್ಲ ಆಕೆ ದಂಧೆ ನಡೆಸಲು ಬಯಸುತ್ತಾಳೆ ಎಂದರ್ಥ. ಯಾಕೆಂದರೆ ಇಂತಹ ನಿರ್ಲಜ್ಜ ಮಾತನ್ನು ಸಭ್ಯ ಸಮಾಜದ ಯಾವ ಮಹಿಳೆಯೂ ಆಡಲು ಸಾಧ್ಯವಿಲ್ಲ ಎಂದೆಲ್ಲ ಮುಖೇಶ್ ಖನ್ನಾ ಹೇಳಿದ್ದರು. ಮಹಿಳೆಯರ ಬಗ್ಗೆ ಈ ರೀತಿಯ ಸಂವೇದನಾರಹಿತ ಹೇಳಿಕೆ ನೀಡಿರೋದು ನೆಟ್ಟಿಗರನ್ನು ಕೆರಳಿಸಿದೆ.

ಈ ವೀಡಿಯೋಗೆ ಭಾರೀ ಪ್ರಮಾಧಲ್ಲಿ ನೆಗೆಟಿವ್ ಕಮೆಂಟ್ ಬಂದಿದೆ. ಕಮೆಂಟ್ ವಿಭಾಗದಲ್ಲಿ 64 ವರ್ಷದ ಈ ನಟನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಲ್ಯದಲ್ಲಿ ಎಲ್ಲರ ನೆಚ್ಚಿನ ಹೀರೋ ಆಗಿದ್ದ ಶಕ್ತಿಮಾನ್ ಇವರೇನಾ ಅಂತಾ ಹಲವರು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿನ ಅಸಂಬದ್ಧ ಮಾತುಗಳ ಬಗ್ಗೆ ಜನರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Leave A Reply