ಗಾಳಿ ಮಳೆಯ ಅಬ್ಬರ | ಈ ತಾಲೂಕಿನ ಶಾಲೆಗಳಿಗೆ ರಜೆ

ವರುಣರಾಯ ತನ್ನ ಸಿಟ್ಟನ್ನು ಕಡಿಮೆ ಮಾಡುವ ಮೂಡಲ್ಲಿ ಇಲ್ಲ ಎಂದೆನಿಸುತ್ತದೆ. ಏಕೆಂದರೆ, ಭಾರೀ ಮಳೆಯ ಆರ್ಭಟದಿಂದ ಮಳೆ ಗಾಳಿ ನಿರಂತರವಾಗಿ ಬೀಸುತ್ತಿದೆ. ಮಲೆನಾಡಿನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮ ಮೂಡಿಗೆರೆ ಕಳಸ ತಾಲೂಕಿನ ಶಾಲೆಗಳಿಗೆ ರಜೆ ಬುಧವಾರ ರಜೆ ಘೋಷಿಸಿ ಬಿಇಓ ಆದೇಶ ಹೊರಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದೆ ಅಲ್ಲದೆ ಹಲವು ಕಡೆ ಗುಡ್ಡ ಕುಸಿತ, ಮನೆಗಳ ಮೇಲೆ ಮರ ಬಿದ್ದು ಸಾವು ನೋವು ಸಂಭವಿಸಿದೆ.

ಮಂಗಳವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು ಶಾಲಾ ಮಕ್ಕಳಿಗೆ ರಜೆ ನೀಡುವಂತೆ ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ 1ರಿಂದ 10ನೇ ತರಗತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ಇಂದಿನ ಪರಿಸ್ಥಿತಿ ನೋಡಿಕೊಂಡು ನಾಳೆ ರಜೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.