ನಾಲ್ವರನ್ನು ಕೊಂದ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಬೇಡ-ಪತ್ನಿ ,ಕುಟುಂಬಸ್ಥರಿಂದ ಗೃಹ ಸಚಿವರಿಗೆ ಮನವಿ

ಬೆಂಗಳೂರು : ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರವೀಣ್ ಕುಮಾರ್ ಇದೀಗ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದರೆ ತಮಗೆ ಜೀವಬೆದರಿಕೆಯಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಆತನನ್ನು ಬಿಡುಡೆಗೊಳಿಸಬಾರದು ಎಂದು ಪತ್ನಿ,ಕುಟುಂಬಸ್ಥರು ಆ.10ರಂದು ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಪ್ರವೀಣ್ ಕುಮಾರ್ ಪತ್ನಿ ಹಾಗೂ ಕೊಲೆಗೀಡಾಗಿದ್ದವರ ನಿಕಟ ಸಂಬಂಧಿಗಳು ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದರು. ತನ್ನ ನಿಕಟ ಸಂಬಂಧಿಕರನ್ನೇ ಕೊಲೈಗೈದ ಪ್ರಕರಣದ ಆರೋಪಿ ಪ್ರವೀಣ್ ಕುಮಾರ್ ಸಮಾಜಕ್ಕೆ ಕಂಟಕ ಪ್ರಾಯವಾಗಿದ್ದು, ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: