ಪ್ರವಾಹದಲ್ಲಿ ಸಿಲುಕಿ ಜೀವಭಯದಿಂದ ಒದ್ದಾಡುತ್ತಿದ್ದ ಇಬ್ಬರ ರಕ್ಷಣೆ- ವೀಡಿಯೊ ವೈರಲ್

ಮಳೆಯ ಆರ್ಭಟ ಹೆಚ್ಚುತ್ತಲೇ ಇದ್ದು, ಅದೆಷ್ಟೋ ಪ್ರಾಣ ಹಾನಿ ಸಂಭವಿಸಿದೆ. ಜನರು ನೆಲೆಯಲು ಸೂರು ಇಲ್ಲದೆ ಪರದಾಡುವಂತೆ ಆಗಿದೆ. ಮನೆ, ಕೃಷಿ, ಮಾನವ ಎಂದೂ ನೋಡದ ಮಳೆರಾಯ ಎಲ್ಲವನ್ನೂ ನೆಲಸಮ ಮಾಡಿದ್ದಾನೆ.

ಇದರ ನಡುವೆ ಆಂಧ್ರಪ್ರದೇಶದಲ್ಲೂ ವರುಣನ ನರ್ತನ ಜೋರಾಗಿಯೇ ಇದ್ದು, ಜನರು ರಕ್ಷಣೆಯತ್ತ ಮುಖ ಮಾಡಿದ್ದಾರೆ. ಇದೀಗ ಕಡಪ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಇಬ್ಬರನ್ನು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದು, ಇದರ ವೀಡಿಯೊ ವೈರಲ್ ಆಗಿದೆ.

ಕಾನೂನು ಜಾರಿ ಸಂಸ್ಥೆಯು ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 43 ಸೆಕೆಂಡುಗಳ ಈ ವಿಡಿಯೋದಲ್ಲಿ, ರಕ್ಷಣಾ ದೋಣಿಯಲ್ಲಿ ಸ್ಥಳೀಯ ನಿವಾಸಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಹಗ್ಗದ ಸಹಾಯದಿಂದ ಎಳೆಯುತ್ತಿರುವುದನ್ನು ತೋರಿಸಲಾಗಿದೆ.

ಒಮ್ಮೆ ದಡ ಸೇರುವ ಕಾತುರತೆಯಿಂದ ಯುವಕರು ಒದ್ದಾಡುತ್ತಿದ್ದರು. ಹೇಗೂ ಸಿಬ್ಬಂದಿಗಳ ಪ್ರಯತ್ನದಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಲಾಗಿದೆ. ಓಬುಲರೆಡ್ಡಿ ಪಲ್ಲಿ ವಂಕಾ ಗ್ರಾಮದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಈ ಇಬ್ಬರು ಯುವಕರು ಸಿಕ್ಕಿಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಪೊಲೀಸ್ ಇಲಾಖೆ ಟ್ವೀಟ್ ಮಾಡಿದ್ದು, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ.ವಿ.ರಾಜೇಂದ್ರನಾಥ್ ರೆಡ್ಡಿ ಅವರು ಯುವಕರನ್ನು ರಕ್ಷಣೆ ಮಾಡುವಲ್ಲಿ ಕಡಪ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

Leave A Reply

Your email address will not be published.