ರೈತನೋರ್ವನ ಖಾತೆಗೆ ಬಿತ್ತು ಬರೋಬ್ಬರಿ 6,833 ಕೋಟಿ ರೂಪಾಯಿ | ಅಷ್ಟಕ್ಕೂ ಈ ಹಣ ಎಲ್ಲಿಂದ ಬಂತು… ಗೊತ್ತೇ?

ರೈತರ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇರುತ್ತದೆ ಎಂದರೆ ನಂಬುತ್ತೀರಾ ? ಹೌದು ನಂಬಬೇಕು. ನೀವು ನಂಬೀರೋ ಬಿಡ್ತೀರೋ, ಬಿಹಾರದ ರೈತನೊಬ್ಬನ ಖಾತೆಯಲ್ಲಿ ಬರೋಬ್ಬರಿ 6833 ಕೋಟಿ ರೂಪಾಯಿ ಹಣ ಇದೆ. ಬ್ಯಾಂಕ್ ಗೆಂದು ಪಾಸ್ ಬುಕ್ ಅಪ್ಡೇಟ್ ಮಾಡಲು ಹೋದಾಗ ಈ ಪಾಟಿ ಭಾರೀ ಪ್ರಮಾಣದ ಹಣ ಇರುವುದು ಪತ್ತೆಯಾಗಿದೆ.

ಏಕಾಏಕಿ ಬಡ ರೈತನೊಬ್ಬ ಸಹಸ್ರ ಕೋಟ್ಯಧಿಪತಿಯಾಗಿದ್ದಾನೆ. ಬಿಹಾರ್ ನ ಲಖಿಸರಾಯ್ ಜಿಲ್ಲೆಯ ಬರ್ಹಿಯಾ ಗ್ರಾಮದ ನಿವಾಸಿ ಸುಮನ್ ಕುಮಾರ್ ಅವರ ಖಾತೆಯಲ್ಲಿ ಇಷ್ಟೊಂದು ಹಣ ಕಂಡುಬಂದಿದೆ. ಕೋಟಕ್ ಸೆಕ್ಯುರಿಟೀಸ್ ಮಹೀಂದ್ರಾ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಸುಮನ್ ಕುಮಾರ್ ಅವರ ಖಾತೆಗೆ 6,833 ಕೋಟಿಗೂ ಹೆಚ್ಚು ಹಣ ಬಂದಿದೆ.ಲಖಿಸರಾಯ್ ಜಿಲ್ಲೆಯ ಬರ್ಹಿಯಾ ಗ್ರಾಮದ ನಿವಾಸಿ ಸುಮನ್ ಕುಮಾರ್ ಅವರ ಖಾತೆಯಲ್ಲಿ ಇಷ್ಟೊಂದು ಹಣ ಕಂಡುಬಂದಿದೆ. ಕೋಟಕ್ ಸೆಕ್ಯುರಿಟೀಸ್ ಮಹೀಂದ್ರಾ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಸುಮನ್ ಕುಮಾರ್ ಅವರ ಖಾತೆಗೆ 6,833 ಕೋಟಿಗೂ ಹೆಚ್ಚು ಹಣ ಬಂದಿದೆ.

ವೃತ್ತಿಯಲ್ಲಿ ರೈತರಾಗಿರುವ ಸುಮನ್ ಕೋಟಕ್ ಮಹೀಂದ್ರಾ ಬ್ಯಾಂಕ್ ಪಾಟ್ನಾ ಶಾಖೆಯಲ್ಲಿ ಡಿಮ್ಯಾಟ್ ಖಾತೆ ಹೊಂದಿದ್ದು, ಷೇರು ವ್ಯವಹಾರ ನಡೆಸುತ್ತಾರೆ. ತನ್ನ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿದಾಗ, ಬ್ಯಾಲೆನ್ಸ್ ಇರುವ ಕಾಲಮ್ಮಿನ ಅಡಿಯಲ್ಲಿ ಸಾಲು ಸಾಲು ನಂಬರುಗಳನ್ನು ಕಂಡ ರೈತ ಬೆಚ್ಚಿ ಬಿದ್ದಿದ್ದ. ಯಾರೋ ತಪ್ಪಾಗಿ ಹಣ ಹಾಕಿರಬೇಕು, ಅಥವಾ ಸಾಫ್ಟ್ ವೇರ್ ಎರರ್ ಆಗಿರಬೇಕೆಂದು ಕೊಂಡಿದ್ದ ಆ ರೈತ. ಆದರೆ ಖಾತೆಯಲ್ಲಿ ಹಣ ಯಾರಿಂದ ಜಮಾ ಆಗಿದೆ ಹಾಗೂ 6-7 ದಿನ ಕಳೆದರೂ ಖಾತೆಯಲ್ಲಿ ಹಾಗೆಯೇ ಹಣ ಇರುವುದರಿಂದ ಸುಮನ್‌ಗೆ ಅಚ್ಚರಿಯಾಗಿದೆ.ಅಷ್ಟು ಹಣ ಬೇರೆ ಅಕೌಂಟಿನಿಂದ ಇವರಿಗೆ ಟ್ರಾನ್ಸ್ಫರ್ ಆದರೂ ಕೂಡಾ, ಅದು ಕಳಿಸಿದ ವ್ಯಕ್ತಿಗೆ ಇಷ್ಟು ದಿನ ಆದ್ರೂ ಗೊತ್ತಾಗಿಲ್ಲ ಅಂದ್ರೆ, ಆತ ಇನ್ನೆಂಥ ಗಟ್ಟಿ ಕುಳ ಇರ್ಬೇಕು ?

ಮೊಬೈಲ್‌ನಿಂದ ಸುಮನ್ ಟ್ರೇಡಿಂಗ್ ಕೆಲಸ ಮಾಡ್ತಾರೆ. ಇತ್ತಿಚೇಗೆ ಸುಮನ್ ಅಕೌಂಟ್‌ಗೆ ತುಂಬಾ ಹಣ ಬಂದಿರುವುದು ಗೊತ್ತಾಗಿದೆ. ಕೂಡಲೇ ಅವರು ತುಂಬಾ ಮಂದಿಯನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ಕಸ್ಟಮರ್ ಕೇರ್ಗೂ ವಿಚಾರಿಸಲಾಯಿತು. ಹಣ ಬಂದಿರುವುದರ ಬಗ್ಗೆ ಖಾತ್ರಿ ಪಡೆಸಿದ್ದಾರೆ. ಎಲ್ಲೂ ರೈತನಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಈಗ ಈ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಕೇಳಲಾಗಿದೆ. ಆದರೆ ಈವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಸುಮನ್ ಕುಟುಂಬ ಸದಸ್ಯ ಶ್ರವಣ್ ಕುಮಾರ್ ಹೇಳಿದ್ದಾರೆ. ಕಷ್ಟ ಪಟ್ಟು ದುಡಿದು ಬದುಕುವ ಈ ರೈತ ಕುಟುಂಬ ಅಷ್ಟು ದುಡ್ಡು ಬಂದರೂ ನಯಾ ಪೈಸಾ ವಿಥ್ ಡ್ರಾ ಮಾಡದೆ ನಿಯತ್ತಿನಿಂದ ಕುಳಿತಿದೆ. ಪರರ ದುಡ್ಡನ್ನು ಬಾಚಿಕೊಳ್ಳಲು ಅವಕಾಶಕ್ಕಾಗಿ ಕಾಯುವ ಜನರಿರುವಾಗ, 6,833 ಕೋಟಿಯ ಊಹಿಸಿಕೊಳ್ಳಲಾಗದ ಅಗಾಧ ಮೊತ್ತವನ್ನು ಕೂಡಾ ಮುಟ್ಟದ ಈ ರೈತ ಕುಟುಂಬದ ನಿಯತ್ತು ಜನ ಮೆಚ್ಚಿಕೆ ಪಡೆದಿದೆ.

Leave A Reply

Your email address will not be published.