ವಿಟ್ಲ : ತೀವ್ರ ಹದಗೆಟ್ಟ ಬಿಲ್ಲಂಪದವು-ನೆಗಳಗುಳಿ ಶಾಲಾ ರಸ್ತೆ !

ವಿಟ್ಲ:- ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು ತೀವ್ರ ಹದಗೆಟ್ಟಿತ್ತು.
ರಸ್ತೆಯು ಅಲ್ಲಲ್ಲಿ ಕೆಟ್ಟು ಹೋದುದರಿಂದ ತುರ್ತು ಸಂದರ್ಭದಲ್ಲಿ ಯಾವುದೇ ವಾಹನದವರು ಈ ಬಾಗಕ್ಕೆ ಬರದಿರುವುದಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಸುಮಾರು 50 ಮನೆಯವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಎಲ್ಲ ಜನರು ಈ ರಸ್ತೆಯನ್ನು ಅವಲಂಬಿಸುವಂತಾಗಿದೆ. ಮಳೆಗಾಲದಲ್ಲಿ ಅಗತ್ಯ ವಸ್ತುಗಳನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುವ ಪರಿಸ್ಥಿತಿ ಈ ಉೂರಿನವರದ್ದಾಗಿದೆ
ಈ ರಸ್ತೆಗೆ ಯಾವುದೇ ಅನುದಾನ ಬರದ ಕಾರಣ ನೆಗಳಗುಳಿಯ ಯುವಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಈ ರಸ್ತೆಯ ಸ್ಥಿತಿಗತಿಯ ಬಗ್ಗೆ ತಿಳಿಸಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಮಾಡಿದರು, ಈ ಮನವಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಕಾರ್ಯಾಲಯವು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಈ ರಸ್ತೆಯನ್ನು ತಕ್ಷಣ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳಲು ವರದಿಯನ್ನು ನೀಡಿತು. ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮಂಗಳೂರು,ಅಳಿಕೆ ಗ್ರಾಮ ಪಂಚಾಯತ್ ಗೆ ಈ ರಸ್ತೆಯನ್ನು ಪರಿಶೀಲಿಸಿ ಕ್ರಮ ಕೆಗೊಳ್ಳಲು ತಿಳಿಸಿತು, ಆದರೆ ಈ ರಸ್ತೆಗೆ ಅಭಿವ್ರದ್ಧಿ ಗೆ ತಮ್ಮಲ್ಲಿ ಬೇಕಾದ ಅನುದಾನ ವಿಲ್ಲ ಎಂದು ತಿಳಿಸಿತು.ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮಂಗಳೂರು ಈ ರಸ್ತೆಯು 1.50ಕಿ.ಮೀ ಉದ್ದ ವಿದ್ದು ಇದಕ್ಕಾಗಿ ಅಂದಾಜು 105 ಲಕ್ಷ ವೆಚ್ಚವಾಗುತ್ತದೆ ಈ ಕಡತವನ್ನು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ದುರಸ್ತಿಗೆ ಬೇಕಾದ ಈ ಮೊತ್ತ ತಮ್ಮಲ್ಲಿ ಇಲ್ಲ ಹಾಗೂ ಈ ಕಡತವನ್ನು ಕರ್ನಾಟಕ ಸರಕಾರಕ್ಕೆ ಕಲುಹುಸಲಾಗಿದೆ ಎಂದು ತಿಳಿಸಿದರು. 2017 ರಲ್ಲಿ ಈ ರಸ್ತೆ ದುರಸ್ತಿಯ ಬಗ್ಗೆ ತಯಾರಾದ ಕರ್ಣಾಟಕ ಸರಕಾರದ ಕಡತ(RRC 278) ವಿಧಾನ ಸೌದದಲ್ಲಿ ಇದ್ದು ಈ ರಸ್ತೆ ದುರಸ್ಥಿಯ ಕಡತದ ದ ಬಗ್ಗೆ ಸ್ಥಳೀಯ ಶಾಸಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದು ಫಲ ಕಾಣಲಿಲ್ಲ.ಶಾಸಕರು ಕೇವಲ 50 ಸಾವಿರದ ಅನುದಾನವನ್ನು ಒದಗಿಸಿ ಕೇವಲ 50 ಮೀಟರ್ ಕಾಂಕ್ರಿಟ್ ಮಾಡಿಸಿ,ಊರಿನವರ ಬಾಯಿ ಮುಚ್ಚಲು ಹೊರಟಿದ್ದಾರೆ,ಊರಿನ ನಾಗರಿಕರು ಈ ರಸ್ತೆಯ ದುರಸ್ಥಿಯುು ತಕ್ಷಣ ಆಗಬೇಕೆಂದು ಒಂದು ನೆಗಳಗುಳಿ ರಸ್ತೆ ಹಿತರಕ್ಷಣಾ ವೇದಿಕೆಯನ್ನು ಮಾಡಿಕೊಂಡು ಈ ರಸ್ತೆಯ ಅಭಿವೃದ್ಧಿ ಯು ತಕ್ಷಣ ಆಗದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ ಉಗ್ರ ಹೋರಾಟದ ಎಚ್ಚರಿಕೆ ಮಾಡಲು ಮುಂದಾಗಿದ್ದಾರೆ.

ಕಳೆದ 6 ವರ್ಷಗಳಿಂದ ಈ ರಸ್ತೆ ದುರಸ್ತಿಯ ಬಗ್ಗೆ ಬೇಡಿಕೆಯನ್ನು ಇಡಲಾಗಿದೆ,ಸತತ ಮನವಿಯನ್ನೂ ನೀಡಿದ್ದೇವೆ. ಆದರೆ ನಮ್ಮ ಕೂಗನ್ನು ಯಾರೂ ಹೇಳುತ್ತಿಲ್ಲ.ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ, ಜನಪ್ರತಿನಿಧಿಗಳಿಗೆ, ಸರಕಾರಿ ಇಲಾಖೆಗಳಿಗೆ ಮನವಿ ನೀಡಿ ಸಾಕಾಗಿದೆ ಅಲ್ಲದೆ ಯಾವುದೇ ಪ್ರಯೋಜನ ಆಗಲಿಲ್ಲ. ಅಭಿವೃದ್ಧಿ ಕಾಣದ ಬಿಲ್ಲಂಪದವು – ನೆಗಳಗುಳಿ ರಸ್ತೆಯನ್ನು ಈ ಬಾರಿ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರು ಮಾಡದಿದ್ದರೆ, ಮುಂದಿನ 2024 ರ ಚುನಾವಣೆಯನ್ನು ಬಹಿಷ್ಕರಿಸಿ,ಉಗ್ರ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಾವು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ರಸ್ತೆಯ ದುರಸ್ಥಿಯೇ ಮುಖ್ಯವಾಗಿದೆ. ದಿನಂಪ್ರತಿ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದೇ ನಮಗೆ ಒಂದು ದೊಡ್ಡ ಸವಾಲಾಗಿದೆ. ಡಿ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ನೆಗಳಗುಳಿ ನಾಗರಿಕರು ಒಟ್ಟು ಸೇರಿ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ.
ರಮೇಶ ನೆಗಳಗುಳಿ


Ad Widget

Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: