BREAKING NEWS: ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ವಿಷಯ ಮಾಸುವ ಮುನ್ನವೇ ಈಗ ಮತ್ತೊಂದು ಆರ್ ಎಸ್ ಎಸ್ ನಾಯಕನಿಗೆ ಚಾಕು ಹಾಕಿದ ಘಟನೆಯೊಂದು ನಡೆದಿದೆ.

ಬೈಕ್ ಟಚ್ ಆಯಿತು ಎಂಬ ಕಾರಣಕ್ಕೆ ಯಾರದೋ ಜಗಳ ಬಿಡಿಸೋಕೆ ಹೋದ ಆರ್ ಎಸ್ ಎಸ್ ಮುಖಂಡನಿಗೆ ಚಾಕುವಿನಿಂದ ಚುಚ್ಚಿದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಂದು ಬೈಕ್ ಗೆ ಮತ್ತೊಂದು ಗಾಡಿ ಟಚ್ ಆದ ಪರಿಣಾಮ, ರಸ್ತೆಯಲ್ಲಿ ಇಬ್ಬರು ಜಗಳದಲ್ಲಿ ಮಾಡುತ್ತಿದ್ದರು. ಈ ವೇಳೆ ಆ ದಾರಿಯಲ್ಲಿ ಬಂದಂತಹ ಮಾಲೂರಿನ ಆರ್ ಎಸ್ ಎಸ್ ಮುಖಂಡ ರವಿ ಎಂಬುವರು, ಜಗಳ ಬಿಡಿಸೋದಕ್ಕೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ರವಿ ಅವರಿಗೆ ಕ್ಷಲ್ಲಕ ಕಾರಣಕ್ಕಾಗಿ ಇಬ್ಬರು ವ್ಯಕ್ತಿಗಳು ಚಾಕು ಮೂಲಕ ಚುಚ್ಚಿದ್ದಾರೆ. ಇದರಿಂದಾಗಿ ಆರ್ ಎಸ್ ಎಸ್ ಮುಖಂಡ ರವಿ ಅವರ ಮುಖಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದ್ಯದ ಅಮಲಿನಲ್ಲಿ ಅನ್ಯ ಕೋಮಿನ ಯುವಕರಿಬ್ಬರು ಚಾಕುವಿನಿಂದ ಇರಿದಿದ್ದಾರೆ. ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ ಹಿಡಿಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಇಬ್ಬರೂ ಆರೋಪಿಗಳು ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ರವಿ ಮೇಲೆ ಚಾಕು ಇರಿಯಲಾಗಿದೆ. ಆರೋಪಿಗಳ ಪೈಕಿ ಓರ್ವ ಆಟೋ ಚಾಲಕನಾಗಿದ್ದು, ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಇನ್ನೂ ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಆರ್ ಎಸ್ ಎಸ್ ಕಾರ್ಯಕರ್ತರು, ಮಾಲೂರು ಬಸ್ ನಿಲ್ದಾಣದ ಎದುರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.