ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ. ಈ ಮಧ್ಯೆ ಎಡಿಜಿಪಿ ಅಲೋಕ್ ಕುಮಾರ್ ಬೆಳ್ಳಾರೆ ಠಾಣೆಗೆ ಭೇಟಿ ನೀಡಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಡಿವೈಎಸ್ಪಿ ಗಾನ ಪಿ. ಕುಮಾರ್, ಬೆಳ್ಳಾರೆ ಠಾಣಾ ಎಸ್.ಐ ಸುಹಾಸ್ ಅವರೊಂದಿಗೆ ತನಿಖೆಯ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ “ಮಸೂದ್ ಹಾಗೂ ಪ್ರವೀಣ್ ನೆಟ್ಟಾರು ಕುರಿತ ಪ್ರಕರಣದ ಪ್ರಗತಿ ಯಾವ ಹಂತದಲ್ಲಿದೆ ಎಂಬುವುದನ್ನು ಅವಲೋಕಿಸಲು ಆಗಮಿಸಿದ್ದೇನೆ. ಯಾವೆಲ್ಲಾ ಸಾಕ್ಷಿಗಳು ಸಿಕ್ಕಿವೆ, ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಹೇಗೆ ನಡೆದಿದೆ ಒಟ್ಟು ತನಿಖೆಯ ಕುರಿತಾದ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ, ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬ ಬಗ್ಗೆಯೂ ನಿರ್ದೇಶನ ನೀಡಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತಾಗಲೂ ಸಿ.ಸಿ ಟಿವಿ ಅಳವಡಿಸುವಿಕೆ ಮುಂತಾದ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದೇನೆ. ಪ್ರಕರಣವನ್ನು ಎನ್.ಐ.ಎಗೆ ನೀಡಿದ್ದರೂ ಕೂಡ ಕರ್ನಾಟಕ ಪೊಲೀಸರಾಗಿ ನಾವು ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ಎನ್.ಐ.ಎ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಪ್ರಕರಣದ ಕುರಿತಾದ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದೇವೆ. ಬೇರೆ ಸೆಂಟ್ರಲ್ ಎಜೆನ್ಸಿಗಳ ಜೊತೆಗೂ ನಾವು ಸಂಪರ್ಕವಿಟ್ಟುಕೊಂಡಿದ್ದು, ಅವರಿಗೂ ಎಲ್ಲಾ ಮಾಹಿತಿ ನೀಡಿದ್ದೇವೆ.
ಪ್ರವೀಣ್ ನೆಟ್ಟಾರ್ ನ್ನು ಹೊಡೆದವರು ಯಾರು ಎಂದು ಗೊತ್ತಾಗಿದೆ ಎಂದು ಸ್ಫೋಟಕ ಎಡಿಜಿಪಿ ಅಲೋಕ್ ಕುಮಾರ್ ಅವರು. ತನಿಖೆ ತುಂಬಾ ಪ್ರಗತಿಯಲ್ಲಿದೆ, ನೇರವಾಗಿ ಭಾಗಿಯಾದವರು ಮೊದಲೇ ಪ್ಲಾನ್ ಮಾಡಿದ ಕಾರಣದಿಂದ ಬೇಗ ಹುಷಾರಾಗಿ ಬಿಟ್ಟಿದ್ದಾರೆ. ಉಳಿದವರು ಈಗಾಗಲೇ ವಿಚಾರಣೆಯಲ್ಲಿ ಇದ್ದಾರೆ ಎಂದಿದ್ದಾರೆ ಅಲೋಕ್ ಕುಮಾರ್ ಅವರು. NIA ಇನ್ನೂ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ ಅನ್ನುವುದು ಅವರ ಮಾತಿನಲ್ಲಿ ಸೂಕ್ಷ್ಮವಾಗಿ ಕೇಳಿಬಂತು.
ಹೊಸ ರೂಲ್ಸ್ ಸಂಜೆ ಆರರಿಂದ ಬೆಳಗ್ಗೆ ಆರು ಗಂಟೆಯವರೆಗೆ ಮಾತ್ರ ಅನ್ವಯ: ಬೈಕ್ ಹಿಂಬಂದಿ ಸವಾರರ ನಿರ್ಭಂಧ ಆದೇಶ ಸಂಜೆ ೬ರಿಂದ ಬೆಳಗ್ಗೆ 6ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಉಳಿದ ಸಮಯದಲ್ಲಿ ಎಂದಿನಂತೆ ಹಿಂಬದಿ ಸವಾರರು ತೆರಳಬಹುದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
You must log in to post a comment.