ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ವಿಧಿಸಿದ್ದ ನಿರ್ಬಂಧ ವಾಪಾಸ್ !

ಮಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ ಎಂಬ ಆದೇಶವನ್ನು ವಾಪಾಸ್ ಪಡೆದಿದೆ.

ಇಂದಿನಿಂದ ಎಡಿಜಿಪಿ ಅಲೋಕ್ ಕುಮಾರ್ ಅವರು ನಾಳೆಯಿಂದ ಬೈಕ್ ನಲ್ಲಿ ಹಿಂಬದಿ ಸವಾರರಿಗೆ ಸಂಚರಿಸಲು ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ನಿಯಮ ಅನ್ವಯವಾಗಲಿದೆ ಎಂದಿದ್ದರು.

ಅಲ್ಲದೇ, 18 ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಇದರಲ್ಲಿ ವಿನಾಯಿತಿ ನೀಡಲಾಗಿದೆ. ಪುರುಷ ಹಿಂಬದಿ ಸವಾರರಿಗೆ ಈ ನಿಯಮ ಅನ್ವಯವಾಗಲಿದೆ ಎಂದಿದ್ದರು.

Leave A Reply