ದಕ್ಷಿಣ ಕನ್ನಡ | ಮತ್ತೊಮ್ಮೆ ಮುಂದುವರಿದ ರಾತ್ರಿ ನಿರ್ಬಂಧ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತೆ ನಿರ್ಬಂಧ ಮುಂದುವರಿಸಲಾಗಿದೆ. ರಾತ್ರಿಯ ನಿರ್ಬಂಧ ಮತ್ತೆ ಎರಡನೆಯ ಬಾರಿ ಮುಂದುವರಿಕೆ ಆಗುತ್ತಿದೆ. ಇನ್ನೂ 2 ದಿನಗಳ ಕಾಲ ( ಅಂದರೆ ಆ.3 ಮತ್ತು 4 ರಂದು) ರಾತ್ರಿ ನಿರ್ಬಂಧವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ದ.ಕ. ಜಿಲ್ಲಾಧಿಕಾರಿ ಈ ಆದೇಶ ಮಾಡಿದ್ದಾರೆ. ಈ ಹಿನ್ನೆಲೆ ಆ.5 ರ ಬೆಳಗ್ಗೆ 6 ವರೆಗೆ ನಿರ್ಬಂಧ ಮುಂದುವರಿಯಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇತ್ತೀಚಿಗೆ ಬೆಳ್ಳಾರೆ ಮತ್ತು ಸುರತ್ಕಲ್‌ನಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಂಜೆ 6 ರಿಂದ ಮುಂಜಾನೆ 6 ರವರೆಗೆ ತುರ್ತು ಸೇವೆಯನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧ ಇವತ್ತಿಗೆ ಮುಕ್ತಾಯ ಆಗಿತ್ತು, ಈಗ ಅದು ಮತ್ತೆ ಎರಡು ದಿನ ಮುಂದುವರಿದಿದೆ.

error: Content is protected !!
Scroll to Top
%d bloggers like this: