ಮಗಳ ಪಾಲಿಗೆ ಸೂಪರ್ ಹೀರೋ ಆದ ತಂದೆ!

ತಂದೆ ಅಂದ್ರೇನೆ ಮಕ್ಕಳಿಗೆ ಗೊತ್ತಾಗದಂತೆ ಬೆನ್ನ ಹಿಂದೆಯೇ ನಿಂತು ಅವರ ಕಷ್ಟ ಸುಖ ಆಲಿಸುವವನು. ಕಷ್ಟ ಅಂದಾಗ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವವನು. ಇಂತಹ ಅಪ್ಪ ಯಾವಾಗಲೂ ಜೊತೆಯಾಗಿ ಇರುತ್ತಾನೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಹೌದು. ಸಾಮಾಜಿಕ ಜಾಲತಾಣದಲ್ಲಿ ಇಂತಹುದೊಂದು  ವಿಡಿಯೋ ವೈರಲ್‌ ಆಗಿದೆ. ಇನ್ನೇನು ಮಗಳು ಸಾವನ್ನಪ್ಪುತ್ತಾಳೆ ಅನ್ನುವಷ್ಟರಲ್ಲಿ ತಂದೆ ಆಕೆಯ ಪ್ರಾಣ ಕಾಪಾಡಿದ್ದಾನೆ. ಹೌದು. ಬಾಲಕಿಯೊಬ್ಬಳನ್ನು ತಂದೆಯೇ ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ವೈರಲ್ ಆಗಿದ್ದು, ಆತನ ಸಮಯ ಪ್ರಜ್ಞೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಆ ವೀಡಿಯೋದಲ್ಲಿ ಇರುವುದೇನೆಂದು ಮುಂದೆ ಓದಿ.

ಫುಟ್ಪಾತ್‌ ಮೇಲೆ ನಿಂತು ಬಾಲಕಿಯ ತಂದೆ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದೇ ಸಮಯದಲ್ಲಿ ಕಾರೊಂದು ವೇಗವಾಗಿ ಚಲಿಸಿದೆ. ಅದರ ಬೆನ್ನಲ್ಲೇ ಬಾಲಕಿ ಸೈಕಲ್‌ ತುಳಿಯುತ್ತ ರಸ್ತೆ ದಾಟಿದ್ದಾಳೆ. ಆಕೆಯ ವೇಗ ಎಷ್ಟಿತ್ತೆಂದರೆ ಸೈಕಲ್‌ ಕೂಡ ನಿಯಂತ್ರಣಕ್ಕೆ ಸಿಗಲೇ ಇಲ್ಲ. ಅತಿ ವೇಗವಾಗಿ ಬಂದ ಸೈಕಲ್‌ ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಅಷ್ಟರಲ್ಲಿ ಅಪಾಯ ಗಮನಿಸಿದ ಬಾಲಕಿಯ ತಂದೆ ಅಲ್ಲಿಂದ ಓಡಿ ಹೋಗಿ ಆಕೆಯನ್ನು ತಡೆದಿದ್ದಾನೆ.

ಒಂದು ವೇಳೆ ಆತ ಅಷ್ಟು ವೇಗವಾಗಿ ಹೋಗಿ ರಕ್ಷಿಸದಿದ್ದರೆ ಇದ್ದರೆ ಬಾಲಕಿಯ ಪ್ರಾಣಕ್ಕೆ ಕುತ್ತು ತರುತ್ತಿತ್ತು. ಮಗಳನ್ನು ರಕ್ಷಿಸಲು ಅಪಾಯಕಾರಿ ಸಾಹಸ ಮಾಡಿದ ತಂದೆಗೆ ಏಟಾಗಿದೆ. ಅದೃಷ್ಟವಶಾತ್‌ ಬಾಲಕಿಗೆ ಏನೂ ಆಗಿಲ್ಲ. ದಿಢೀರನೆ ನಡೆದ ಘಟನೆಯಿಂದ ಬೆದರಿ ಕಂಗಾಲಾಗಿದ್ದ ತಂದೆ – ಮಗಳು ಇಬ್ಬರನ್ನೂ ಆತನ ಸ್ನೇಹಿತರು ಸಮಾಧಾನ ಮಾಡಿದ್ದಾರೆ.

ಈ ವಿಡಿಯೋ ಇನ್‌ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ತಂದೆಯನ್ನು ನಿಜವಾದ ಸೂಪರ್ ಹೀರೋ ಎಂದು ಬಣ್ಣಿಸಿದ್ದಾರೆ. ಒಟ್ಟಾರೆ, ಮಗಳನ್ನು ಉಳಿಸಿದೆ ಹೆಮ್ಮೆ ಅಪ್ಪನ ಪಾಲಾಗಿದೆ.

Leave A Reply