ಸಮಸ್ತ ಕೇರಳ ಸುನ್ನೀ ಸ್ಟುಡೆಂಟ್ ಫೆಡರೇಶನ್ ಇದರ ಕರ್ನಾಟಕ ರಾಜ್ಯ ಸಮಿತಿ ಇದರ 2022-23 ನೇ ಸಾಲಿನ ರಾಜ್ಯ ಸಮಿತಿ ರಚನೆಯಾಗಿದ್ದು ಇದರ ಸಂಘಟನಾ ಕಾರ್ಯ ದರ್ಶಿಯಾಗಿ ಸುಳ್ಯ ತಾಲೂಕಿನ ಬಾಳಿಲ ನಿವಾಸಿ ಖ್ಯಾತ ವಾಗ್ಮಿಇಕ್ಬಾಲ್ ಬಾಳಿಲ ಆಯ್ಕೆ ಗೊಂಡಿರುತ್ತಾರೆ.ಎಸ್ಕೆ ಎಸ್ ಎಸ್ ಎಫ್ ಸಂಘಟನೆಯ ನೂತನ ಪದಾಧಿಕಾರಿಗಳ ಸಭೆಯು ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿದ್ದು ಕರ್ನಾಟಕದ ವಿವಿದ ಜಿಲ್ಲೆಗಳಿಂದ ಪದಾಧಿಕಾರಿಗಳು ಆಗಮಿಸಿದ್ದು , ಸಮಿತಿಯ ಅಧಿಕೃತ ಘೋಷಣೆಯನ್ನು ಇಂದು ಎಸ್ಕೆ ಎಸ್ ಎಸ್ ಎಫ್ ನಾಯಕರಾದ ಪಾಣಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಘೋಷಣೆ ಮಾಡಿರುತ್ತಾರೆ. ಅದರಲ್ಲಿ ಸುಳ್ಯ ತಾಲೂಕಿನಿಂದ ಪ್ರತಿನಿಧಿಯಾಗಿ ಇಕ್ಬಾಲ್ ಬಾಳಿಲ ಆಯ್ಕೆ ಯಾಗಿರುತ್ತಾರೆ.ಇವರು ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿಯಾಗಿದ್ದು ಉಡುಪಿ ಭಾಗದಲ್ಲಿ ಉದ್ಯಮಿಯಾಗಿರುತ್ತಾರೆ.ಸಂಘಟನಾ ಚತುರರು, ಸೌಹಾರ್ದ ವೇದಿಕೆ ಮೂಲಕ ಜನಪ್ರಿಯರಾದ ಇವರು ಹಲವಾರು ಶಾಲಾ ಕಾಲೇಜುಗಳಿಗೆ ಶೈಕ್ಷಣಿಕ ತರಬೇತಿಯನ್ನು ನೀಡುತ್ತಾ ಜನರ ಪ್ರೀತಿಗೆ ಪಾತ್ರರಾಗಿರುತ್ತಾರೆ ಅಲ್ಲದೆ ವಿವಿದ ಸಂಘಟನೆಯ ಸಂಘ-ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ,ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಸೇವೆಗಳನ್ನು ಗೈಯುತ್ತಿದ್ದು ಇಂದು ಬೆಳೆದು ಬಂದ ಹಾದಿಯನ್ನು ಪರಿಗಣಿಸಿ ಎಸ್ಕೆ ಎಸ್ ಎಸ್ ಎಫ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನು ನೀಡಿ ಅಲಂಕರಿಸಿದೆ.
ಎಸ್ಕೆಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯ ದರ್ಶಿಯಾಗಿ ಇಕ್ಬಾಲ್ ಬಾಳಿಲ ಆಯ್ಕೆ

You must log in to post a comment.