ಟಿಡಿಪಿ ಸಂಸ್ಥಾಪಕ, ಖ್ಯಾತ ನಟ ಎನ್ ಟಿ ರಾಮರಾವ್ ( NTR) ಪುತ್ರಿ ಆತ್ಮಹತ್ಯೆ

ಆಂಧ್ರಪ್ರದೇಶದ ಖ್ಯಾತ ಚಿತ್ರನಟ ಹಾಗೂ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಾರ್ಟಿ ಸಂಸ್ಥಾಪಕರಾಗಿದ್ದ ಎನ್‌ಟಿ ರಾಮರಾವ್‌ ಅವರ ಪುತ್ರಿ, ಕಾಂತಮನೇನಿ ಉಮಾ ಮಹೇಶ್ವರಿ ಸೋಮವಾರ ( ಆ.1) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ ಉಮಾ ಮಹೇಶ್ವರಿ, ಅಲ್ಪ ಕಾಲದ ಅನಾರೋಗ್ಯದಲ್ಲಿದ್ದರು. ಎನ್‌ಟಿಆರ್ ಅವರ 12 ಜನ ಮಕ್ಕಳಲ್ಲಿ ಅತ್ಯಂತ ಕಿರಿಯವರಾಗಿದ್ದರು. ಹೈದರಾಬಾದ್ ನ ತಮ್ಮ ಸ್ವಗೃಹದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆರೋಗ್ಯ ಗುಣವಾಗದ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ. ಉಮಾ ಮಹೇಶ್ವರಿ ಅವರಿಗೆ 52 ವರ್ಷ ವಯಸ್ಸಾಗಿತ್ತು. ಉಮಾ ಮಹೇಶ್ವರಿ ನಾಲ್ಕು ಸಹೋದರಿಯರಲ್ಲಿ ಕಿರಿಯವರು. ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದೇಶ್ವರಿ ಮತ್ತು ಹಾಲಿ ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಸಹೋದರಿಯರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಂದ್ರಬಾಬು ನಾಯ್ಡು, ಅವರ ಪುತ್ರ ನಾರಾ ಲೋಕೇಶ್ ಮತ್ತು ಇತರ ಕುಟುಂಬ ಸದಸ್ಯರು ಮಹೇಶ್ವರಿ ನಿವಾಸಕ್ಕೆ ಬಂದಿದ್ದಾರೆ. ಉಮಾ ಮಹೇಶ್ವರಿ ಅವರ ಸಹೋದರ ಜನಪ್ರಿಯ ಟಾಲಿವುಡ್ ನಟ ಮತ್ತು ಟಿಡಿಪಿ ಶಾಸಕ ಎನ್.ಬಾಲಕೃಷ್ಣ. ಅದರೊಂದಿಗೆ ವಿದೇಶದಲ್ಲಿ ನೆಲೆಸಿರುವ ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಂತಮನೇನಿ ಉಮಾ ಮಹೇಶ್ವರಿ ಅವರ ವೈವಾಹಿಕ ವಿಷಯದ ಬಗ್ಗೆ ಹೇಳುವುದಾದರೆ, ಅವರು ಎರಡು ವಿವಾಹವಾಗಿದ್ದರು. ಭಾರತೀಯ ಮೂಲದ ಉದ್ಯಮಿ ನರೇಂದ್ರ ರಾಜನ್ ಅವರನ್ನು ಮೊದಲಿಗೆ ವಿವಾಹವಾಗಿದ್ದ ಉಮಾ ಮಹೇಶ್ವರಿ, ವೈಯಕ್ತಿಕ ಕಾರಣಗಳಿಗಾಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಕ.ಶ್ರೀನಿವಾಸ್ ಪ್ರಸಾದ್ ಅವರನ್ನು ಮಹೇಶ್ವರಿ ವಿವಾಹವಾಗಿದ್ದರು. ಅವರೊಂದಿಗೆ ಜ್ಯುಬಿಲಿ ಹಿಲ್ಸ್‌ನಲ್ಲಿ ವಾಸವಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಉಮಾ ಮಹೇಶ್ವರಿ ಅವರು ಇಡೀ ಎನ್‌ಟಿಆರ್ ಕುಟುಂಬದಲ್ಲಿ ಚಿತ್ರರಂಗಕ್ಕೆ ಕಾಲಿಡದೇ ಇದ್ದ ಏಕೈಕ ವ್ಯಕ್ತಿ ಆಗಿದ್ದರು.

ಪೊಲೀಸರು ಸ್ಥಳಕ್ಕೆ ಬಂದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿಯೇ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಆ‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಎನ್‌ಟಿಆರ್‌ಗೆ ಎಂಟು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದರು. ನಾಲ್ಕು ಹೆಣ್ಣು ಮಕ್ಕಳಲ್ಲಿ ಮಹೇಶ್ವರಿ ಕಿರಿಯವರು. ಇತ್ತೀಚೆಗೆ ಉಮಾ ಮಹೇಶ್ವರಿ ಅವರ ಮಗಳ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಒಟ್ಟಾಗಿ ಸೇರಿದ್ದರು. ಎನ್‌ಟಿಆರ್ ಅವರ ಮೂವರು ಪುತ್ರರು ಈಗಾಗಲೇ ನಿಧನರಾಗಿದ್ದಾರೆ. ಎನ್‌ಟಿಆರ್ 1996ರಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

error: Content is protected !!
Scroll to Top
%d bloggers like this: