ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾದ ಬಾಲಕ!!

Share the Article

ಏಳು ವರ್ಷದ ಬಾಲಕ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ವಾಷಿಂಗ್ ಮಿಷನ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಬಾಲಕನನ್ನು ಟ್ರಾಯ್ ಖೋಲಿಯಾರ್ ಎಂದು ಗುರುತಿಸಲಾಗಿದೆ.

ಬಾಲಕ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಹೆತ್ತವರು ದೂರು ಕೊಟ್ಟಿದ್ದು, ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಮಗು ನಾಪತ್ತೆಯಾದಾಗ ತಂದೆ ಮನೆಯಲ್ಲೇ ಇದ್ದರು. ಆದ್ರೆ ತಾಯಿ ಮಾತ್ರ ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಮರಳಿದ್ದರು.

ನಾಪತ್ತೆಯಾದ ಬಾಲಕನನ್ನು ಹುಡುಕಾಡಿದಾಗ, ಮಗು ಶಾಲೆ ಸಮವಸ್ತ್ರದಲ್ಲೇ ವಾಷಿಂಗ್ ಮಿಷನ್ ನಲ್ಲಿಯೇ ಶವವಾಗಿ ಪತ್ತೆಯಾಗಿದೆ. ಮಗುವನ್ನು ದಂಪತಿ 2019ರಲ್ಲಿ ದತ್ತು ಪಡೆದಿದ್ದರು. ಇದೀಗ ಮಗು ಮೃತ ಪಟ್ಟಿದೆ.

ಟೆಕ್ಸಾಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಯಾರನ್ನೂ ಆರೋಪಿ ಎಂದು ಪರಿಗಣಿಸದೇ ತನಿಖೆ ಆರಂಭಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

Leave A Reply