ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಇಂದು ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ ನಂತರ, ಒಡಿಯೂರು ಶ್ರೀ ಗುರುದೇವತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಭೇಟಿ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಮನೆ ಮಂದಿಯೊಂದಿಗೆ ಮಾತನಾಡಿದ ಸ್ವಾಮೀಜಿ ಅವರು ಪ್ರವೀಣ್ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ “ ಪ್ರವೀಣ್ ಕುಟುಂಬಸ್ಥರಿಗೆ ಅನ್ಯಾಯ ಆಗಿದೆ. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಕಾನೂನು ಇಂಥಹ ವಿಷಯದಲ್ಲಿ ಕಠಿಣ ಆಗಬೇಕು. ಕಾನೂನು ಕಠಿಣ ಆಗದಿದ್ದರೆ ಇಂತಹ ಘಟನೆಗಳು ಹೆಚ್ಚುವ ಸಾಧ್ಯತೆ ಇದೆ. ಇನ್ನು ಮುಂದೆ ಇಂಥದ್ದು ನಡೆಯಬಾರದು. ಇದು ಮರುಕಳಿಸಬಾರದು. ಇದಕ್ಕೊಂದು ತಡೆ ಬೇಕು. ದ್ವೇಷ ಅನ್ನುವಂತದಿದ್ದರೆ ಕೊಲೆ ಅದಕ್ಕೆ ಪರಿಹಾರವಲ್ಲ, ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು. ಪ್ರವೀಣ್ ಕುಟುಂಬಕ್ಕಾದ ಪರಿಸ್ಥಿತಿ ಮತ್ಯಾರಿಗೂ ಬರಬಾರದು. ಮುಖ್ಯಮಂತ್ರಿಗಳೇ ಮನೆಗೆ ಭೇಟಿ ನೀಡಿರುವುದರಿಂದ ನ್ಯಾಯ ದೊರೆಯುವ ಭರವಸೆಯಿದೆ’ ಎಂದರು.
ಕೆ.ಎಂ.ಎಫ್ ಉಪಾಧ್ಯಕ್ಷ ಜಯರಾಮ.ರೈ ಬಳೆಜ್ಜ ಹಾಗೂ ಸ್ವಾಮೀಜಿಯವರ ಭಕ್ತರು ಉಪಸ್ಥಿತರಿದ್ದರು.
You must log in to post a comment.