ಅಮ್ಮನ ಕಣ್ಣೆದುರಲ್ಲೇ ರೈಲ್ವೆ ಕ್ರಾಸ್ ದಾಟುತ್ತಿದ್ದ ಮಗಳಿಗೆ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಮೃತಳು ಲಿಸಿ ಮತ್ತು ದಿವಂಗತ ಕಿಶೋರ್ ಅವರ ಪುತ್ರಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಂದಿತಾ.
ಶಾಲಾ ಬಸ್ ಇನ್ನೊಂದು ಬದಿಯಲ್ಲಿ ನಿಂತಿದ್ದ ಕಾರಣ, ಕಾರಿನಲ್ಲಿ ಇಳಿದ ವಿದ್ಯಾರ್ಥಿನಿ ಅವಸರದಿಂದ ಕ್ರಾಸಿಂಗ್ ದಾಟುವಾಗ, ವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿದೆ. ಈ ಘಟನೆ ಶನಿವಾರ ಮುಂಜಾನೆ 7.45ರ ಸುಮಾರಿಗೆ ನಡೆದಿದ್ದು, ಕಣ್ಣೂರು ಕಡೆಗೆ ಹೊರಟ್ಟಿದ್ದ ಪರುಶುರಾಮ್ ಎಕ್ಸ್ಪ್ರೆಸ್ ನಂದಿತಾಳಿಗೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿ ಒಬ್ಬರು ಹೇಳುವ ಪ್ರಕಾರ ನಂದಿತಾ ರೈಲ್ವೆ ಕ್ರಾಸಿಂಗ್ ದಾಟಿದ್ದಳು. ಆದರೆ, ಆಕೆಯ ಬ್ಯಾಗ್ ರೈಲಿಗೆ ಸಿಲುಕಿದ್ದರಿಂದ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದು, ಕಣ್ಣ ಎದುರಲ್ಲೇ ಮಗಳ ದುರ್ಮರಣವನ್ನು ನೋಡಿ ನೋವಿನಲ್ಲಿ ಮುಳುಗಿ ಹೋಗಿದ್ದರೆ. ಅಪಘಾತದ ಬೆನ್ನಲ್ಲೇ ಹತ್ತಿರ ಓಡಿ ಬಂದ ಸ್ಥಳೀಯರು ನಂದಿತಾಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಳ ಅಪ್ಪ ಕಿಶೋರ್ ಸಾವನ್ನಪ್ಪಿದ್ದರು. ಇದೀಗ ಮಗಳನ್ನೂ ಕಳೆದುಕೊಂಡ ಅಮ್ಮನ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಣೂರಿನ ಕಾಕ್ಕಡ್ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಂದಿತಾ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.