ಹುಟ್ಟುಹಬ್ಬದಂದೇ ಕೊಲೆಯಾದ ಯುವಕನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ!!!

ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾಗಿದ್ದ ಯುವಕನೋರ್ವನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಯುವಕ ಹೇಮಂತ್ ಕೊಲೆ ನಡೆದಿದ್ದು, ಆರೋಪಿಗಳಿಂದ ಕೊಲೆ ಮಾಡಿದ್ದು ಯಾಕಾಗಿ ಎಂದು ತಿಳಿದು ಬಂದಿದೆ. ಹೇಮಂತ್ ಕೊಲೆ ಹಿಂದೆ ಕುಖ್ಯಾತ ಪಾತಕಿಯ ಕೈವಾಡವಿದೆ ಎಂದು ಹೇಳಲಾಗಿದೆ.

ನಗರದಲ್ಲಿ ಜುಲೈ 16 ರಂದು ಕೆಂಗೇರಿಯ ಕೋನಸಂದ್ರ ಮುಖ್ಯರಸ್ತೆಯಲ್ಲಿರುವ ಅಂಡರ್ ಪಾಸ್ ಬಳಿ ರುಂಡವಿಲ್ಲದ ದೇಹವೊಂದು ಸಿಕ್ಕಿದ್ದು, ಅದರ ಜಾಡು ಹಿಡಿದ ಪೊಲೀಸರಿಗೆ ಟಿ.ಗೊಲ್ಲಹಳ್ಳಿ ನಿವಾಸಿ ಹೇಂಮತ್ ಎಂಬ ಯುವಕ ದೇಹ ಅನ್ನೋದು ತಿಳಿಯಿತು. ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದಿನ ರಾತ್ರಿ ಸ್ನೇಹಿತರ ಜತೆಗೆ ಹೋಗಿದ್ದ ಹೇಮಂತ್ ರಾತ್ರಿ ಕಳೆಯುವಷ್ಟರಲ್ಲಿ ಭೀಕರವಾಗಿ ಕೊಲೆಯಾಗಿದ್ದ. ಮನಸ್ಸಿಗೆ ಬಂದಂತೆ ಚಾಕುವಿನಿಂದ ಇರಿದು, ನಂತರ ಆತನ ತಲೆಯನ್ನು ಜಚ್ಚಿ ಹಾಕಲಾಗಿತ್ತು. ಮೃತ ದೇಹ ಸಿಕ್ಕಾಗ ಅಲ್ಲಿ ತಲೆ ಇತ್ತು ಅನ್ನೋದು ಗೊತ್ತಾಗದಂತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಈ ಕೊಲೆಯನ್ನು ಕಂಡ ಪೊಲೀಸರು ಹಂತಕರಿಗೆ ಅದ್ಯಾವ ಕೋಪದಿಂದ ಈ ರೀತಿ ಕೊಲೆ ಮಾಡಿದ್ದಾರೆ ಅನ್ನೋದು ಪ್ರಶ್ನೆಯಾಗಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬಳಿಕ ಇಷ್ಟೊಂದು ಕ್ರೂರವಾಗಿ ಹತ್ಯೆಗೈದ ಹಂತಕರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರೆಸಿದಾಗ, ಪೊಲೀಸರಿಗೆ ಬಿಗ್ ಟ್ವಿಸ್ಟೊಂದು ದೊರಕಿದೆ . ರೌಡಿಶೀಟರ್ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದೇ ಕೊಲೆಗೆ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೌದು, ಹೇಮಂತ್ ಹತ್ಯೆ ಹಿಂದೆ ಪೊಲೀಸರು ಊಹೆ ಮಾಡಿದಂತೆ ಆತನ ಯಾವ ಸ್ನೇಹಿತರ ಕೈವಾಡ ಇಲ್ಲ. ಬದಲಿಗೆ ಬೆಂಗಳೂರಿನ ಕೆ.ಜಿ. ನಗರ ಪೊಲೀಸರ ಅತಿಥಿಯಾಗಿರೋ ಕುಖ್ಯಾತ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರರ ಕೈವಾಡವಿದೆಯಂತೆ. ಹೌದು, ಈ ಕುಳ್ಳು ರಿಜ್ವಾನ್ ಸಹಚರರೇ ಹೇಮಂತ್‌ನನ್ನು ಇಷ್ಟು ಭೀಕರವಾಗಿ ಕೊಲೆ ಮಾಡಿದ್ದಾರಂತೆ.

ಬರ್ತ್ ಡೇ ದಿನ ಹೇಮಂತ್ ತನ್ನ ಸ್ನೇಹಿತರೊಂದಿಗೆ ಸಮೀಪದ ಡಾಬಾ ವೊಂದಕ್ಕೆ ಹೋಗಿದ್ದ. ಈ ಸಂದರ್ಭದಲ್ಲಿ ಹೇಮಂತ್ ಹಾಗೂ ಆತನ ಸ್ನೇಹಿತರ ಮಧ್ಯೆ ಬೆಂಗಳೂರಿನ ರೌಡಿಸಂ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಬೆಂಗಳೂರಲ್ಲಿ ಯಾರು ಹೇಳಿಕೊಳ್ಳುವಂತ ರೌಡಿಗಳಿಲ್ಲ. ಎಲ್ಲ ಪುಡಿರೌಡಿಗಳೇ ಅಂತ ಮಾತನಾಡಿಕೊಂಡಿದ್ದಾರೆ. ಈ ಮಾತುಗಳು ಪಕ್ಕದಲ್ಲೇ ಇದ್ದ ನಟೋರಿಯಸ್ ರೌಡಿ ಕುಳ್ಳು ರಿಜ್ವಾನ್ ಶಿಷ್ಯರ ಕಿವಿಗೆ ಬಿದ್ದಿದೆ. ರಿಜ್ವಾನ್ ಸಹಚರರು ಪಾರ್ಟಿ ಮುಗಿಸಿ ಮನೆಗೆ ಹೋಗಲು ರೆಡಿಯಾಗಿದ್ದಾರೆ. ಇತ್ತ ಕಡೆ ಹೇಮಂತ್ ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ಹೋಗ್ತಿದ್ದಾರೆ. ಆದರೆ ಹೇಮಂತ್ ತನಗೆ ಗೊತ್ತಿಲ್ಲದೇ ಕುಳ್ಳು ರಿಜ್ವಾನ್ ಶಿಷ್ಯರ ಬಳಿಯೇ ಮನೆ ಹತ್ತಿರ ಎಲ್ಲಾದ್ರೂ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ.

ಕೂಡಲೇ ಅದಕ್ಕೇ ಕಾಯುತ್ತಿದ್ದ ಈ ರೌಡಿಗಳು ಹೇಮಂತ್‌ನನ್ನ ಬೈಕ್‌ ನಲ್ಲಿ ಕರೆದುಕೊಂಡು ಬಂದು ಕಿರಿಕ್ ಶುರು ಮಾಡಿದ್ದಾರೆ. ನಮ್ ಬಾಸ್ ಕುಳ್ಳು ರಿಜ್ವಾನ್ ಗೊತ್ತಿಲ್ವೇನೋ ಅಂತ ಕುಡಿದ ಅಮಲಿನಲ್ಲಿ ಜಗಳ ತೆಗೆದಿದ್ದಾರೆ. ನಮ್ ಬಾಸ್ ಗೊತ್ತಿಲ್ಲ ಅಂತೀಯ, ನಿನಗೆ ಒಂದ್ ಗತಿ ಕಾಣಿಸ್ತೀವಿ ಎಂದು ಹೇಳಿ ಮಾರಕಾಸ್ತ್ರಗಳಿಂದ ಹೇಮಂತ್ ಮೇಲೆ ಹಲ್ಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ನಂತರ ಆತನ ಮುಖ ಗುರುತು ಸಿಗಬಾರದೆಂದು ಮಚ್ಚಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಭೀಕರ ಕೊಲೆ ಮಾಡುವ ದೃಶ್ಯಗಳನ್ನು ಹಂತಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಅದನ್ನು ಕುಳ್ಳು ರಿಜ್ವಾನ್ ಮೊಬೈಲ್‌ಗೆ ಕಳುಹಿಸಿದ್ದಾರೆ. ‘ಬಾಸ್ ನೀವ್ ಗೊತ್ತಿಲ್ಲ ಅಂದಿದಕ್ಕೆ ಅನ್ನ ಕಥೆಯೇ ಮುಗಿಸ್ಬಿಟ್ಟೆವು’ ಅಂತ ಮೇಸೇಜ್ ಕೂಡಾ ಹಾಕಿದ್ದಾರೆ.

ಈ ರೌಡಿ ಕುಳ್ಳು ರಿಜ್ವಾನ್, ಅಪಹರಣ, ಕೊಲೆ ಯತ್ನ, ರಾಬರಿ, ಬೆದರಿಕೆ, ಗಾಂಜಾ, ಕೊಲೆ, ಆರ್ಮ್ಸ್ ಆಕ್ಟ್ ಸೇರಿದಂತೆ ಸುಮಾರು 20 ಪ್ರಕರಣಗಳಲ್ಲಿ ಬೇಕಾಗಿದ್ದ. ಈತ ಎರಡನೇ ಮದುವೆಗೆ ಶಿವಮೊಗ್ಗದಲ್ಲಿ ರೆಡಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರೌಡಿ ಬಗ್ಗೆ ಗೊತ್ತಿಲ್ಲ ಅನ್ನೋ ಒಂದು ಸಿಲ್ಲಿ ರೀಸನ್‌ಗೆ ಅಮಾಯಕ ಜೀವ ಬಲಿಯಾಗಿದ್ದು ಮಾತ್ರ ದುರದೃಷ್ಟಕರ ಎಂದೇ ಹೇಳಬಹುದು.

error: Content is protected !!
Scroll to Top
%d bloggers like this: