ರಣವೀರ್​ ಬೆತ್ತಲೆ ಫೋಟೋ ನೋಡಿ’ ನನ್ನದೇ ಆಟದಲ್ಲಿ ನನ್ನನ್ನೇ ಸೋಲಿಸಿದ್ದಿರಿ’ ಎಂದ ಬಾಲಿವುಡ್​ ಬಿಚ್ಚಮ್ಮ ಪೂನಂ ಪಾಂಡೆ ಮಾಡಿರೋ ಕಾಮೆಂಟ್​ ವೈರಲ್!​

ಮುಂಬೈ: ಬಾಲಿವುಟ್​​ ಸ್ಟಾರ್​ ನಟ ರಣವೀರ್​ ಸಿಂಗ್​ ಅವರ ಬೆತ್ತಲೆ ಫೋಟೋಶೂಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದೀಗ
ಆತನ ಟೋನ್ ಮಾಡಲ್ಪಟ್ಟ ಬೆತ್ತಲೆ ದೇಹದ ಮೇಲೆ ಹಲವು ಹುಡುಗಿಯರು ಕಣ್ಣು ಹಾಕಿದ್ದಾರೆ. ಹೆಚ್ಚಿನವರು ನಾಚಿಕೆಯಿಂದ
ವಾರೆ ನೋಟದಲ್ಲಿ ಅಳತೆ ಮಾಡಿದರೆ, ಬಾಲಿವುಡ್ ನ ಇಬ್ಬರು ಬಿಚ್ಚು ಮನಸ್ಸಿನ ಬಿಚ್ಚಮ್ಮ ನವರು ಮನ ಬಿಚ್ಚಿ ಮಾತಾಡಿದ್ದಾರೆ. ಅವರಲ್ಲಿ ಮೊದಲಿನವಳು ಫ್ಯಾಷನ್ ಡಿಸಾಸ್ಟರ್ ಎಂದು ಕರೆಯಲ್ಪಡುವ ಉರ್ಫಿ ಜಾವೇದ್. ಅನ್ನು ನೋಡಿ ನಾನು ಮೂಡಿಗೆ ಒಳಗಾಗಿದ್ದೇನೆ ದೀಪಿಕಾ ಪಡುಕೋಣೆ ಒಪ್ಪಿಕೊಂಡರೆ ನಾನು ಆತನ ಎರಡನೆಯವಳಾಗಿ ಕೈಹಿಡಿಯಲು ರೆಡಿ ಎಂದಿದ್ದಾಳೆ ಉರ್ಫಿ .

ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ರಣವೀರ್​ ಬೆತ್ತಲೆ ಫೋಟೋಶೂಟ್​ ಮಾಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಮತ್ತು ಅನುರಾಗ್​ ಕಶ್ಯಪ್​ ಸೇರಿದಂತೆ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರ ವಿರೋಧದ ನಡುವೆಯೂ ರಣವೀರ್​ ಪತ್ನಿ ದೀಪಿಕಾ ಪಡುಕೋಣೆ ಪತಿಗೆ ಬೆಂಬಲ ನೀಡಿದ್ದಾರೆ. ಫೋಟೋಗಳು ಜಾಲತಾಣದಲ್ಲಿ ಹರಿದಾಡುವ ಮುನ್ನವೇ ದೀಪಿಕಾ ವೀಕ್ಷಿಸಿದ್ದರಂತೆ, ಅಲ್ಲದೇ ತುಂಬಾ ಚೆನ್ನಾಗಿವೆ ಎಂದು ಪ್ರತಿಕ್ರಿಯೆ ಕೂಡ ನೀಡಿದ್ದರಂತೆ. ಈ ಫೋಟೋ ವೈರಲ್​ ಆದ ಬಳಿಕವೂ ದೀಪಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪತಿಗೆ ಬೆಂಬಲವಾಗಿ ನಿಂತಿದ್ದಾರೆ.

ಇದರ ನಡುವೆ ಮಾದಕ ‘ ಐಟಂ’, ಮಾಡೆಲ್​ ಕಂ ನಟಿ ಪೂನಂ ಪಾಂಡೆ ಮಾಡಿರುವ ಕಾಮೆಂಟ್​ ಸಹ ಭಾರೀ ವೈರಲ್​ ಆಗಿದೆ. ಸದಾ ಕಮ್ಮಿ ಕವರ್ ಮಾಡಿ ಹೆಚ್ಹು ಅನ್ ಕವರ್ ಮಾಡುವ ಪೂನಮ್ ಪಾಂಡೆ, ಈಗ ರಣ್ ವೀರನ ಹಾಟ್ ಸೀಟ್ ನೋಡಿ
ಟ್ವೀಟ್​ ಮಾಡಿದ್ದಾಳೆ. ರಣವೀರ್​ ಅವರ ಬೆತ್ತಲೆ ಫೋಟೋಗಳನ್ನು ಶೇರ್​ ಮಾಡಿ, “ನನ್ನದೇ ಆಟದಲ್ಲಿ ನನ್ನನ್ನು ಸೋಲಿಸಿದ್ದೀರಿ” ಎಂದಿದ್ದಾರೆ.

ಇನ್ನು ತಮ್ಮ ಬೆತ್ತಲೆ ಫೋಟೋಶೂಟ್​ ಬಗ್ಗೆ ಮಾತನಾಡಿರುವ ರಣವೀರ್​, ದೈಹಿಕವಾಗಿ ಬೆತ್ತಲೆ ಆಗುವುದು ನನಗೆ ಸುಲಭ. ಆದರೆ, ನನ್ನ ಕೆಲವು ನಟನೆಯಲ್ಲಿ ಇನ್ನಷ್ಟು ಬೆತ್ತಲಾಗಿದ್ದೇನೆ. ನೀವು ನನ್ನ ಆತ್ಮವನ್ನು ನೋಡಬಹುದು. ಅದು ಎಷ್ಟು ಬೆತ್ತಲೆಯಾಗಿದೆ? ಅದು ನಿಜವಾಗಿಯು ಬೆತ್ತಲೆಯಾಗಿದೆ. ನಾನು ಸಾವಿರಾರು ಜನರ ಮುಂದೆ ಬೆತ್ತಲೆಯಾಗಬಲ್ಲೆ, ಆದರೆ ಹೊಲಸು ನೀಡುವುದಿಲ್ಲ ಎಂದಿದ್ದಾರೆ.

ಲಲನಾ ಮಣಿಗಳು ತಮ್ಮ ಎಂದಿನ ಬೇಡಿಕೆಯನ್ನು ಉಳಿಸಿಕೊಳ್ಳಲು ಬಟ್ಟೆ ಕಳಚಿ ನಗ್ನತೆ ಪ್ರದರ್ಶಿಸುವುದು ಸಾಮಾನ್ಯವಾಗುತ್ತಿದೆ. ಈಗ ನಾಯಕ ನಟರುಗಳ ಕೂಡ ಫೀಲ್ಡ್ ಗೆ ಇಳಿದಿದ್ದಾರೆ. ಇನ್ನೊಂದು ಸ್ವಲ್ಪ ಸಮಯದ ನಂತರ ಇಬ್ಬರೂ ಒಂದೇ ವೇದಿಕೆಯಲ್ಲಿ ಜುಗಲ್ ಬಂದಿ ಆಡಿದರೂ ಆಶ್ಚರ್ಯವಿಲ್ಲ. ಈ ಬೆತ್ತಲೆ ಪ್ರಯಾಣ ಎಲ್ಲಿಯವರೆಗೆ ಮುಂದುವರೆಯುತ್ತದೆ ಎಂದು ಕಾದು ನೋಡಬೇಕಿದೆ.

Leave A Reply