ಮುಖದಲ್ಲಿರುವ ಅನಗತ್ಯ ಕೂದಲನ್ನು ವ್ಯಾಕ್ಸಿಂಗ್ ಬಳಿಕ ತೆಗೆದ ನಂತರ ದದ್ದುಗಳು ಮೂಡಿದರೆ ಏನು ಮಾಡಬೇಕು? ಇಲ್ಲಿದೆ ಸುಲಭ ಉಪಾಯ

ಹೆಣ್ಣು ಗಂಡು ಯಾರೇ ಆಗಲಿ ಸುಂದರವಾಗಿ ಕಾಣಬೇಕೆಂಬ ಆಸೆ ಖಂಡಿತಾ ಇರುತ್ತದೆ. ಮುಖ ಸುಂದರವಾಗಿ ಕಾಣಲು ಹೆಚ್ಚಾಗಿ ಎಲ್ಲರೂ ವ್ಯಾಕ್ಸಿಂಗ್, ಥ್ರೆಡಿಂಗ್ ಮಾಡುತ್ತಾರೆ. ಅದರಲ್ಲೂ ವ್ಯಾಕ್ಸಿಂಗ್ ಮಾಡಿದ ಬಳಿಕ ಕೆಲವು ಮಹಿಳೆಯರಿಗೆ ತುರಿಸುವಿಕೆ ಜೊತೆಗೆ ದದ್ದುಗಳು ಕಾಣುತ್ತದೆ. ಇವು ಕಿರಿಕಿರಿ ಉಂಟು ಮಾಡುತ್ತದೆ.

ಅನೇಕ ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಅದರಲ್ಲೂ ಮೊದಲ ಬಾರಿಗೆ ವ್ಯಾಕ್ಸಿಂಗ್ ಮಾಡುತ್ತಿದ್ದರೆ, ನಂತರ ಚರ್ಮದ ಮೇಲೆ ಸಣ್ಣ ಮೊಡವೆಗಳು ಮತ್ತು ದದ್ದುಗಳು ಏಳುತ್ತವೆ. ಇದು ವ್ಯಾಕ್ಸಿಂಗ್ ಸಮಯದಲ್ಲಿ ಬೆಳೆದ ಕೂದಲುಗಳನ್ನು ತೆಗೆದ ನಂತರ ಸಣ್ಣ ಬಿಳಿ ಮತ್ತು ಕೆಂಪು ಮೊಡವೆಗಳು ಚರ್ಮದಲ್ಲಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಇದು ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ.


Ad Widget

Ad Widget

Ad Widget

Ad Widget

Ad Widget

Ad Widget

ಇದನ್ನು ನಿವಾರಿಸಲು ಸುಲಭ ಉಪಾಯ ಇಲ್ಲಿದೆ.

ಸೌತೆಕಾಯಿ ಹಾಗೂ ಜೇನುತುಪ್ಪ : 1 ಸಣ್ಣ ಸೌತೆಕಾಯಿ 1 ಟೀಚಮಚ ಜೇನುತುಪ್ಪ ಹತ್ತಿ ಸ್ವ್ಯಾಬ್. ಮೊದಲಿಗೆ ಸೌತೆಕಾಯಿಯನ್ನು ತೊಳೆದು ಅದನ್ನು ತುರಿ ಮಾಡಿ ನಂತರ ಅದರ ಎಲ್ಲಾ ನೀರನ್ನು ಹಿಂಡಿ ಮತ್ತು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ನಂತರ ಇದಕ್ಕೆ ಜೇನುತುಪ್ಪ ಸೇರಿಸಿ ಮತ್ತು ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು 5 ನಿಮಿಷಗಳ ಕಾಲ ಫ್ರಿಜ್ನಲ್ಲಿಡಿ. 5 ನಿಮಿಷಗಳ ನಂತರ ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಡಿ. 15 ನಿಮಿಷಗಳ ನಂತರ 2 ಐಸ್ ಕ್ಯೂಬ್​ಗಳನ್ನು ಮುಖಕ್ಕೆ ಸವರಿ ಬಳಿಕ ನೀರಿನಿಂದ ಮುಖ ತೊಳೆಯಬೇಕು.

ಗ್ರೀನ್ ಟೀ : ನಿಮ್ಮ ಮುಖದ ಮೇಲೆ ದದ್ದು ಎದ್ದಿದ್ದರೆ ತಕ್ಷಣ ನಿಮ್ಮ ಮುಖದ ಮೇಲೆ ಹಸಿರು ಚಹಾ ಬಳಸಿ. 3-4 ಟೀಸ್ಪೂನ್ ಹಸಿರು ಚಹಾ 2 ಟೀಸ್ಪೂನ್ ಅಲೋವೆರಾ ಜೆಲ್ ಹತ್ತಿ ಸ್ವ್ಯಾಬ್ ತಗೊಂಡು ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು ಗ್ರೀನ್ ಟೀ ಮಿಶ್ರಣ ಮಾಡಿ 10-15 ನಿಮಿಷಗಳ ಕಾಲ ಫ್ರಿಜ್ನಲ್ಲಿಡಿ. ನಂತರ, ಹತ್ತಿ ಮೂಲಕ ಅದ್ದಿ ಮತ್ತು ಅದನ್ನು ಮುಖದ ಮೇಲೆ ಹಚ್ಚಿ. 10 ನಿಮಿಷಗಳ ಕಾಲ ಹಚ್ಚಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಕೂಡಾ ಹಾಕಿ ಮುಖಕ್ಕೆ ಸಿಂಪಡಿಸಿ ಬಳಕೆ ಮಾಡಬಹುದು.

ಐಸ್​ ಕ್ಯೂಬ್​ಗಳು :3-4 ಐಸ್ ಕ್ಯೂಬ್​ಗಳು 1 ಹತ್ತಿ ಹ್ಯಾಂಕಿ. ಐಸ್ ಕ್ಯೂಬ್ ಗಳನ್ನು ಕಾಟನ್ ಒಳಗೆ ಅಥವಾ ಶುಚಿಯಾಗಿರುವ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಿಮ್ಮ ಮುಖದ ಮೇಲೆ ಉರಿ ಇರುವಲ್ಲಿ ಸ್ವಲ್ಪ ಸಮಯದವರೆಗೆ ಇಡಿ. ಇದು ಕಿರಿಕಿರಿ ಮತ್ತು ಮೊಡವೆಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಇದಲ್ಲದೇ ಒಂದು ಬಟ್ಟಲಿನಲ್ಲಿ ಸಾಕಷ್ಟು ತಣ್ಣೀರು ಮತ್ತು ಐಸ್ ಕ್ಯೂಬ್ ಗಳನ್ನು ಹಾಕಿ ಸ್ವಲ್ಪ ಹೊತ್ತು ಬಾಯಿ ಮುಕ್ಕಳಿಸಿದರೆ ಈ ಕಿರಿಕಿರಿಯಿಂದ ಪರಿಹಾರ ಪಡೆಯಬಹುದು.

error: Content is protected !!
Scroll to Top
%d bloggers like this: