ಫುಲ್ ಟೈಟಾಗಿ ಶಾಲೆಗೆ ಬಂದ ಶಿಕ್ಷಕಿ…ನಂತರ ಆದದ್ದು ಮಾತ್ರ ಅವಾಂತರ..

ಶಾಲೆಗೆ ಶಿಕ್ಷಕರು ಶಾಲೆಗೆ ಕುಡಿದು ಟೈಟಾಗಿ ಬರುವುದು ಸಿಕ್ಕಿ ಬೀಳುವುದು ಶಿಕ್ಷೆ ಆಗುವುದು. ಇದನ್ನೆಲ್ಲಾ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಶಿಕ್ಷಕಿ ಕುಡಿದು ಟೈಟಾಗಿ ಶಾಲೆಗೆ ಬಂದಿದ್ದಾರೆ. ಅನಂತರ ನಡೆದ ಅವಾಂತರ ಇದೆಯಲ್ಲ ಅಷ್ಟಿಷ್ಟಲ್ಲ.

ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಶಿಕ್ಷಕಿಯೊಬ್ಬಳು ಕಂಠಪೂರ್ತಿ ಕುಡಿದು ಶಾಲೆಗೆ ಬಂದಿದ್ದಾಳೆ. ಮಕ್ಕಳಿಗೆ ಪಾಠ ಹೇಳುವಷ್ಟು ತ್ರಾಣ ಸ್ವಲ್ಪನೂ ಆಕೆಗೆ ಇರಲಿಲ್ಲ. ಕುಡಿದ ಅಮಲಿನಲ್ಲಿ ಪ್ರಜ್ಞೆಯೇ ಇಲ್ಲದಂತೆ ತರಗತಿಯಲ್ಲಿ ಚಯರ್ ಮೇಲೆ ಬಿದ್ದುಕೊಂಡಿದ್ದಾಳೆ ಈ ಶಿಕ್ಷಕಿ.


Ad Widget

Ad Widget

Ad Widget

Ad Widget

Ad Widget

Ad Widget

ಆಕೆಯ ದುರದೃಷ್ಟ ಎಂದರೆ ಅದೇ ಸಮಯದಲ್ಲಿ ಶಿಕ್ಷಣಾಧಿಕಾರಿ ಶಾಲೆಯ ಪರಿಶೀಲನೆಗಾಗಿ ಸ್ಥಳಕ್ಕೆ ಬಂದಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಕ್ಷಣಾಧಿಕಾರಿ ಶಾಲೆಗೆ ಆಗಮಿಸಿದ್ದರು. ಬಂದವರೇ ತರಗತಿಯಲ್ಲಿ ಕುಡಿದು ತರಗತಿಯಲ್ಲಿ ಮಲಗಿದ್ದ ಶಿಕ್ಷಕಿಯನ್ನು ನೋಡಿ ದಂಗಾಗಿ ಹೋಗಿದ್ದಾರೆ. ಆಕೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ.

ಶಿಕ್ಷಕಿಯ ಸ್ಥಿತಿಯನ್ನು ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಎಸ್ಪಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕಿಯ ವೈದ್ಯಕೀಯ ಪರೀಕ್ಷೆ ಮಾಡಲು ಹೇಳಿದ್ದಾರೆ. ನಂತರ ಇಬ್ಬರು ಮಹಿಳಾ ಪೇದೆಗಳು ಸ್ಥಳಕ್ಕಾಗಮಿಸಿ ಶಿಕ್ಷಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರೋಪಿ ಶಿಕ್ಷಕಿ ಕಳೆದ ಹಲವು ದಿನಗಳಿಂದ ಕುಡಿದ ಮತ್ತಿನಲ್ಲಿ ಶಾಲೆಗೆ ಬರುತ್ತಿರುವುದು ಮಕ್ಕಳ ವಿಚಾರಣೆ ವೇಳೆ ತಿಳಿದು ಬಂದಿದೆ. ಕೂಡಲೇ ಈ ಚಟ ಬಿಡುವಂತೆ ಶಿಕ್ಷಕಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳಿಸಿದ್ದಾರಂತೆ.

error: Content is protected !!
Scroll to Top
%d bloggers like this: