BIGG NEWS : ರಾಜ್ಯದಲ್ಲಿ ಮತ್ತೊಂದು ಧರ್ಮ ದಂಗಲ್‌ ಶುರು, ಬಾಂಗ್ಲಾ ಮುಸ್ಲಿಂ ಕಟ್ಟಿಂಗ್‌ ಶಾಪ್‌ ಮೇಲೆ ಮುಗಿಬಿದ್ದ ಮುತಾಲಿಕ್

Share the Article

ಕ್ಷೌರಿಕ ವರ್ಗದ ಮೇಲೆ ಮುಸ್ಲಿಮರ ಪಾರುಪತ್ಯ ನಿಲ್ಲಬೇಕು. ದೇಶದಾದ್ಯಂತ ಕ್ಷೌರಿಕ ಸಮಾಜ ಇದೆ. ಅವರಿಗೆಲ್ಲ ಕ್ಷೌರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯ ವ್ಯವಸ್ಥಿತ ಷಡ್ಯಂತ್ರ. ಮುಸ್ಲಿಮರ ಕ್ಷೌರ ಅಂಗಡಿಗಳನ್ನು ನಾವೇ ಉಡಿಸ್ ಮಾಡುತ್ತೇವೆ‌ ಎಂದು ಶ್ರೀರಾಮಸೇನೆ ಮುಖ್ಯಸ್ಥ ಗುಡುಗಿದ್ದಾರೆ.

ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಲ . ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ. ಅವರಿಗೆ ಯಾರು ಹಾಕಿಕೊಡ್ತಾರೆ, ಅವರಿಗೆ ಬಂಡವಾಳ ಹೇಗೆ ಸಿಗುತ್ತಿದೆ‌. ಆರು ಅಂಗಡಿ ಆಗಿವೆ ಅಂತ ಹೇಳ್ತಿದ್ದಾರೆ. ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ರೆ ಉಡಾಯಿಸಿ ಮಾಡ್ತೀವಿ ಎಂದು ಹೇಳಿದ್ದಾರೆ.

ಈ ಬಗ್ಗೆ ಎಸ್ಪಿ, ಡಿಸಿ ಅವರುಗಂಭೀರವಾಗಿ ತೆಗೆದುಕೊಳ್ಳಬೇಕು. ಬಾಂಗ್ಲಾದೇಶದಿಂದ ಇಲ್ಲಿ ಯಾಕೆ ಬಂದಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ

Leave A Reply

Your email address will not be published.