2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ ನಿಜವಾಯ್ತು!!!

ಜಗತ್ತಿನಲ್ಲಿ ಮಂದಿ ಸಿದ್ಧಿ ಪಡೆದ ಜನರಿದ್ದಾರೆ. ಆದರೆ ತಮ್ಮ ಭವಿಷ್ಯವಾಣಿಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾದವರು ಕೆಲವರು ಮಾತ್ರ. ಪ್ರಪಂಚದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾದಿಗಳಲ್ಲಿ ಮೊತ್ತ ಮೊದಲ ಹೆಸರು ಕೇಳಿಬರುವುದು ಅದು ‘ಬಾಬಾ ವೆಂಗಾ’.

ಈ ಹೆಸರು ನೀವು ಕೇಳಿರಬಹುದು. ತಮ್ಮ ಅದ್ಭುತ ಭವಿಷ್ಯವಾಣಿಯಿಂದಲೇ ಜಗತ್ತಿನಲ್ಲಿ ಪ್ರಸಿದ್ಧರಾದವರು. ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ಈಗಾಗಲೇ ನಿಜವೆಂದು ಸಾಬೀತಾಗಿದೆ. ಇನ್ನೂ ಕೆಲವು ತಪ್ಪಾಗಿವೆ. 1996 ರ ಆಗಸ್ಟ್ ನಲ್ಲಿ ಸ್ತನ ಕ್ಯಾನ್ಸರ್‌ನಿಂದಾಗಿ ನಿಧನರಾಗಿರುವ ಬಾಬಾ ವಂಗಾ ಈವರೆಗೂ 5079ರ ವರ್ಷದವರೆಗಿನ ವಿಶ್ವದ ಭವಿಷ್ಯ ನುಡಿದಿದ್ದಾರೆ.

ಇದಕ್ಕಾಗಿಯೇ ಅವರನ್ನು ಬಾಲ್ಕನ್ ಪ್ರದೇಶದ ನಾಸ್ಟ್ರಾಡಾಮಸ್ ಎಂದೂ ಕರೆಯಲಾಗುತ್ತದೆ. 2022ರ ಕುರಿತಾಗಿ ಅವರು ಹೇಳಿದ್ದ ಎರಡು ಪ್ರಮುಖ ಭವಿಷ್ಯವಾಣಿಗಳ ಪೈಕಿ ಎರಡೂ ಕೂಡ ಇಲ್ಲಿಯವರೆಗೂ ಬಹುತೇಕ ನಿಜವಾಗಿದೆ. ಬಾಬಾ ವೆಂಗಾ ಅವರು 2022 ರಲ್ಲಿ ಕೆಲವು ದೇಶಗಳು ನೀರಿನ ಕೊರತೆಯಿಂದ ತೊಂದರೆಗೀಡಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಸರಿಯಾಗಿ ಪೋರ್ಚುಗಲ್ ಮತ್ತು ಇಟಲಿಯಂತಹ ದೇಶಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ತಮ್ಮ ಜನರನ್ನು ಕೇಳಿಕೊಂಡಿರುವುದು ಈಗಾಗಲೇ ಸುದ್ದಿಯಾಗಿದೆ. ಅದರೊಂದಿಗೆ ಪೋರ್ಚುಗಲ್ ದೇಶವು
ಪ್ರಸ್ತುತ 1950 ರ ದಶಕದ ನಂತರ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ಅದೇ ಸಮಯದಲ್ಲಿ ಇಟಲಿ ದೇಶ ಕೂಡ 1950 ರ ದಶಕದ ನಂತರ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ.

ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹವು ಹಾನಿಯನ್ನುಂಟುಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ. ಬಾಂಗ್ಲಾದೇಶ, ಭಾರತದ ಈಶಾನ್ಯ ಭಾಗ ಮತ್ತು ಥಾಯ್ಲೆಂಡ್ ಕೂಡ ಪ್ರವಾಹದಿಂದ ಪ್ರಭಾವಿತವಾಗಿದೆ. ಈ ವರ್ಷ ಈ ದೇಶಗಳು ಭಾರೀ ಮಳೆಯನ್ನು ಪಡೆದಿರುವುದರಿಂದ ಈ ಭವಿಷ್ಯವು ಸಂಪೂರ್ಣವಾಗಿ ನಿಖರವಾಗಿದೆ.

ಯಾರು ಈ ಮಹಾನ್ ಪ್ರವಾದಿ; ಪ್ರವಾದಿ ಬಾಬಾ ವೆಂಗಾ ಅವರಿಗೆ ಕಣ್ಣುಗಳಿಲ್ಲ. ಬಲ್ಲೇರಿಯಾದ ನಿವಾಸಿಯಾಗಿದ್ದ ಈಕೆ ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಬಹುತೇಕ ಭವಿಷ್ಯವಾಣಿಗಳು ನಿಜವಾಗಿದೆ. 1911ರಲ್ಲಿ ಜನಿಸಿದ್ದ ಇವರು, ತಮ್ಮ 12ನೇ ವಯಸ್ಸಿನಲ್ಲಿ ದೃಷ್ಟಿಶಕ್ತಿ ಕಳೆದುಕೊಂಡಿದ್ದರು. ಆದರೆ ಇಲ್ಲಿವರೆಗೂ ಆಕೆ ಹೇಳಿರುವ ಭವಿಷ್ಯ ಶೇ. 85ರಷ್ಟು ನಿಜವಾಗಿದ್ದರೆ, ಶೇ. 15ರಷ್ಟು ಭವಿಷ್ಯ ತಪ್ಪಾಗಿವೆ.

2004 ರಲ್ಲಿ ಸುನಾಮಿ ಮುನ್ಸೂಚನೆ, ಇದರ ನಂತರ, ಬ್ರಿಟನ್ ರಾಜಕುಮಾರಿ ಡಯಾನಾ ಸಾವು ಅದು ಕೂಡ ನಿಜವಾಗಿತ್ತು. ಬಾಬಾ ವಂಗಾ ಅವರು ಅಮೆರಿಕದ 44ನೇ ಅಧ್ಯಕ್ಷ ಕಪ್ಪಿವರ್ಣೀಯನಾಗಿರಲಿದ್ದಾನೆ ಹಾಗೂ ಅಮೆರಿಕ ದೇಶಕ್ಕೆ ಅವರೇ ಕೊನೆಯ ಅಧ್ಯಕ್ಷರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅಮೆರಿಕದ 44 ನೇ ಅಧ್ಯಕ್ಷ ಬರಾಕ್ ಒಬಾಮಾ ಆಗಿದ್ದರು, ಅರ್ಧ ನಿಜವಾಗಿತ್ತು. ಆದರೆ ಉಳಿದರ್ಧ ನಿಜವಾಗಿಲ್ಲ. ಅಮೆರಿಕದ ಕೊನೆಯ ಅಧ್ಯಕ್ಷರಾಗಿರಲಿಲ್ಲ. ಆ ಮೂಲಕ ಇನ್ನರ್ಧ ಭವಿಷ್ಯ ಸುಳ್ಳಾಗಿತ್ತು.

Leave A Reply

Your email address will not be published.