ಲುಂಗಿ ಉಟ್ಕೊಂಡು ಪ್ರಭುದೇವ್ ಸ್ಟೈಲ್ ನಲ್ಲಿ ಸಖತ್ ಸ್ಟೆಪ್ ಹಾಕಿದ ವಯಸ್ಕ ಹಳ್ಳಿ ವ್ಯಕ್ತಿ, ಡ್ಯಾನ್ಸ್ ನೋಡಿ ಫಿದಾ ಆದ ನೆಟ್ಟಿಗರು

ನಾಟ್ಯದಲ್ಲಂತೂ ಪ್ರಭುದೇವ ಅವರು ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಂತೂ ಅಲ್ಲಗೆಳೆಯುವಂತಿಲ್ಲ. ಚಿತ್ರರಂಗದಲ್ಲಿ ನೃತ್ಯದ ಅಳವಡಿಕೆಗಳ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಭುದೇವ ಇಂದು ಚಿತ್ರರಂಗದ ಶ್ರೇಷ್ಠ ಕೋರಿಯಾಗ್ರಫರ್ ಗಳಲ್ಲಿ ಒಬ್ಬರು ಎಂದು ಪ್ರಸಿದ್ಧ ಪಡೆದಿದ್ದಾರೆ.

ಇಂತಹ ದಕ್ಷಿಣ ಭಾರತದ ಜನಪ್ರಿಯ ನೃತ್ಯಗಾರ ಪ್ರಭುದೇವನಂತೆಯೇ, ಮಧ್ಯವಯಸ್ಕ ವ್ಯಕ್ತಿಯೊಬ್ಬರು ಬಹಳ ಸರಳವಾಗಿ ಈ ರೀತಿ ಸ್ಟೆಪ್ ಹಾಕಿದ್ದಾರೆ. ಹೌದು, ಪ್ರಭುದೇವ ಅವರ ಚಿಕ್ಕು ಬುಕ್ಕು ರೈಲೇ ಹಾಡಿಗೆ ವ್ಯಕ್ತಿಯೊಬ್ಬರು ಬೊಂಬಾಟ್ ಆಗಿ ಅವರಂತೆಯೇ ಸ್ಟೆಪ್ಸ್
ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ರೌಂಡ್ ಹೊಡೆಯುತ್ತಿದ್ದು, ಮಧ್ಯ ವಯಸ್ಕ ವ್ಯಕ್ತಿಯ ಡಾನ್ಸ್ ನೆಟ್ಟಿಗರನ್ನು ಬೆರಗುಗೊಳಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ವ್ಯಕ್ತಿಯು ಪ್ರಭುದೇವ ಅವರ ಅಪ್ರತಿಮ ನೃತ್ಯವನ್ನು ನಕಲು ಮಾಡಿದ್ದಾರೆ. ಈ ವಿಡಿಯೋ ದಲ್ಲಿ ಇರುವಂತೆ, ಮೂವರು ವ್ಯಕ್ತಿಗಳು ಮಾರುಕಟ್ಟೆ ಪ್ರದೇಶದಲ್ಲಿ ನಿಂತು ಮಾತನಾಡುತ್ತಿರುವಾಗ, ಮಧ್ಯದಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯ ಲುಂಗಿ ಮತ್ತು ಶರ್ಟ್ ಅನ್ನು ತೊಟ್ಟಿದ್ದ ವ್ಯಕ್ತಿ ಸಕ್ಕತ್ ಸ್ಟೆಪ್ ಹಾಕಿದ್ದಾರೆ.

1993 ರ ಜಂಟಲ್‌ಮ್ಯಾನ್ ಚಲನಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದು, ಡಾನ್ಸ್ ಮಾಡಿದ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಜುಲೈ 4 ರಂದು ರಾಜ್ ಕುಮಾರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇವರ ನೃತ್ಯ ನೋಡಿದ ನೆಟ್ಟಿಗರು ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

error: Content is protected !!
Scroll to Top
%d bloggers like this: