ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಹಂತಕರ ಪ್ಲಾನ್ ಹೀಗಿದೆ ! 8 ಪುಟದ ಪತ್ರದಲ್ಲಿ ಶಾಕಿಂಗ್ ನ್ಯೂಸ್

ಬಿಹಾರದ ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕರ ತಂಡವನ್ನು ಭೇದಿಸಲಾಗಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಪೊಲೀಸರ ದಾಳಿಯ ವೇಳೆ 8 ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕೆಂಬುದರ ಬಗ್ಗೆ ಬರೆಯಲಾಗಿದೆ!

ಮೊಹಮ್ಮದ್ ಜಲಾವುದ್ದೀನ್  ಮತ್ತು ಅತ್ತರ್ ಪರ್ವೇಜ್ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಬಂಧಿತರಾಗಿರುವ ಜಲಾವುದ್ದೀನ್ ಜಾರ್ಖಂಡ್​ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ. 


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜಾರ್ಖಂಡ್​ನ ನಿವೃತ್ತ ಪೊಲೀಸ್ ಅಧಿಕಾರಿ ಜಲಾಲುದ್ದೀನ್ ಪಾಟ್ನಾದಲ್ಲಿರುವ ತನ್ನ ಮನೆಯಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳ ಮತ್ತು ಮಾರ್ಷಲ್ ಆರ್ಟ್ಸ್​​ನ ತರಬೇತಿ ನೀಡುತ್ತಿದ್ದ. ಈ ತಂಡ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿತ್ತು ಎನ್ನಲಾಗಿದೆ.

ಜುಲೈ 12ರಂದು ಬಿಹಾರಕ್ಕೆ ಮೋದಿ ಭೇಟಿ ವೇಳೆ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜುಲೈ 6, 7ರಂದು ಸಂಚು ರೂಪಿಸಲು ಸಭೆ ಕರೆದಿದ್ದರು. ಬಂಧಿತ ಶಂಕಿತರಿಂದ ಪಿಎಫ್​​ಐಗೆ ಸೇರಿದ 25 ಕರಪತ್ರ ವಶಕ್ಕೆ ಪಡೆಯಲಾಗಿದೆ.

ಬಿಹಾರಕ್ಕೆ ಪ್ರಧಾನಿ ಮೋದಿ ಅವರ ಭೇಟಿಗೆ 15 ದಿನಗಳ ಮೊದಲು ಶಂಕಿತ ಭಯೋತ್ಪಾದಕರಿಗೆ ಫುಲ್ವಾರಿ ಷರೀಫ್‌ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಅವರು ಜುಲೈ 6 ಮತ್ತು 7ರಂದು ಪ್ರಧಾನಿ ಮೋದಿಯನ್ನು ಗುರಿಯಾಗಿಸಲು ಸಂಚು ರೂಪಿಸಲು ಸಭೆಗಳನ್ನು ನಡೆಸಿದ್ದರು. 

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತರನ್ನು ಬಂಧಿಸಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. 
ಉಗ್ರರಿಂದ 25 ಪಿಎಫ್‌ಐ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮಾಡ್ಯೂಲ್ 2047’ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿಎಫ್‌ಐ ಯೋಜಿಸುತ್ತಿದೆ. ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಸಂಚು ಕೂಡ ಇತ್ತು. ಬಂಧಿತರು ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಹೇಗೆ ಬಳಸಬೇಕೆಂದು ಕಲಿಸುತ್ತಿದ್ದರು ಮತ್ತು ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದರು. ಇತರ ರಾಜ್ಯಗಳ ಜನರು ಪಾಟ್ನಾದಲ್ಲಿ ಅವರನ್ನು ಭೇಟಿ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಭೇಟಿಮಾಡಲು ಬರುವವರು ಹೋಟೆಲ್ ನಲ್ಲಿ ತಂಗುವ ವೇಳೆ ಹೆಸರನ್ನು ಬದಲಾಯಿಸುತ್ತಿದ್ದರು’ ಎನ್ನುವ ಸ್ಪೋಟಕ ವಿಚಾರ ತಿಳಿದುಬಂದಿದೆ.

error: Content is protected !!
Scroll to Top
%d bloggers like this: