ಇದೆಂಥಾ ಕ್ರೌರ್ಯ | ಮಗಳ ಖಾಸಗಿ ಭಾಗಕ್ಕೆ ಕುದಿಯುವ ಎಣ್ಣೆ ಸುರಿದ ತಾಯಿ!!! ಕಾರಣ…

ಮಕ್ಕಳಿಲ್ಲದವರು ದೇವರ ಮೊರೆ ಹೋಗುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಮಕ್ಕಳಾಗದವರು ದತ್ತು ತಗೋತ್ತಾರೆ. ಈ ಮೂಲಕವಾದರೂ ಮಗುವಿನ ಆಸೆ ಬಯಸುವವರಿಗೆ ಮಕ್ಕಳ‌ಭಾಗ್ಯ ದೊರಕಿದಂತಾಗುತ್ತದೆ.

ಇಲ್ಲಿ ನಾವು ಹೇಳಲು ಹೊರಟಿರೋ ವಿಷಯವೇನೆಂದರೆ, ದಂಪತಿಗಳಿಬ್ಬರಿಗೆ ಮಕ್ಕಳಿಲ್ಲ ಎಂಬ ಕೊರಗಿತ್ತು. ಹಾಗಾಗಿ 6 ವರ್ಷದ ಮಗುವನ್ನು ದತ್ತು ತಗೊಂಡಿದ್ದಾರೆ. ಆದರೆ ಏನಾಯಿತೋ ಏನೋ ಹೆಂಡತಿಗೆ ಆ ಮಗುವಿನ ಮೇಲೆ ಪ್ರೇಮ ಮೂಡಲಿಲ್ಲ. ಆಕೆಯ ಮಗುವಿನ ಮೇಲೆ ಸಿಡುಕುತನ ಹೆಚ್ಚಾಗುತ್ತಾ ಹೋಯಿತು. ಕೊನೆಗೇ ತನ್ನ ಕ್ರೌರ್ಯ ಮೆರೆದೇ ಬಿಟ್ಟಳು. ಅದು ಕೂಡಾ ಭೀಕರವಾಗಿ. ಆ ಪುಟ್ಟ ಕಂದ ಈ ನೋವನ್ನು ಹೇಗೆ ತಡೆದುಕೊಂಡಿತೋ? ಏನು ವಿಷಯ ಎಂದು ಇಲ್ಲಿ ನೀಡಲಾಗಿದೆ.

35 ವರ್ಷದ ಮಹಿಳೆಯೊಬ್ಬರು ದತ್ತು ಪಡೆದ 6 ವರ್ಷದ ಮಗಳ ಖಾಸಗಿ ಭಾಗಗಳಿಗೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ. ಈ ಕ್ರೌರ್ಯದ ವರ್ತನೆ ಮಾಡಿದ ಪೂನಂ ಎಂಬ ತಾಯಿ ರೂಪದಲ್ಲಿ ಇರುವ ರಾಕ್ಷಸಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ತಂದೆ ಅಜಯ್ ಕುಮಾರ್ ಎನ್ನುವವರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಜಯ್ ಕುಮಾರ್ ತಳ್ಳು ಗಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಬಾಲಕಿಯನ್ನು ದತ್ತು ಪಡೆದ ಪೋಷಕರು ಪಡೆದಿದ್ದಾರೆ.ದಂಪತಿಗೆ ಯಾವುದೇ ಸ್ವಂತ ಮಗು ಇರಲಿಲ್ಲ. ಆರು ತಿಂಗಳ ಹಿಂದೆ ಕುಮಾರ್ ಹೆಣ್ಣು ಮಗುವನ್ನು ‘ದತ್ತು’ ಪಡೆದಿದ್ದಾರೆ ಎಂದು ಊರವರು ಹೇಳಿದ್ದಾರೆ.

ತನ್ನ ಮಗು ಅಲ್ಲದಿದ್ದರೂ ಅದೂ ಒಂದು ಜೀವ ಎನ್ನದೇ ಕ್ರೂರವಾಗಿ ವರ್ತಿಸಿದ ಹೆಣ್ಣು ನಿಜವಾಗಲೂ ಇಷ್ಟೊಂದು ಕ್ರೂರಿಯೇ ಎಂಬ ಜಿಜ್ಞಾಸೆ ಮೂಡುವುದು ಸಹಜ. ಈಕೆ ಹೆಣ್ಣು ಜಾತಿಗೆ ಕಳಂಕ ಎಂದರೆ ತಪ್ಪಿಲ್ಲ.

Leave A Reply