ಹಾಡಹಗಲೇ ಹರಿಯಿತು ‘ಹಂದಿಯ’ ನೆತ್ತರು!! ಹಲವಾರು ಪ್ರಕರಣಗಳ ಆರೋಪಿ, ಭೂಗತ ಪಾತಕಿ ಹೆಬ್ಬೆಟ್ ಮಂಜನ ಸಹಚರನ ಕೊಲೆ

ಶಿವಮೊಗ್ಗ:ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೊಲೆಗಡುಕ, ಭೂಗತ ಪಾತಕಿಯ ಸಹಚರನೊಬ್ಬನನ್ನು ಹಾಡಹಗಲೇ ನಡು ರಸ್ತೆಯಲ್ಲಿ ತಲವಾರಿನಿಂದ ಕಡಿದು ಕೊಲೆ ನಡೆಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಚೌಕಿ ಬಳಿ ನಡೆದಿದೆ.

ಮೃತನನ್ನು ಭೂಗತ ಪಾತಕಿ ಹೆಬ್ಬೆಟ್ ಮಂಜನ ಸಹಚರ ಹಂದಿ ಅಣ್ಣಿ ಎಂದು ಗುರುತಿಸಲಾಗಿದೆ. ಈತ ಕಳೆದ ಹಲವಾರು ವರ್ಷಗಳಿಂದ ರೌಡಿಸಂ ಫೀಲ್ಡ್ ನಲ್ಲಿ ಗುರುತಿಸಿಕೊಂಡಿದ್ದು,ನಾಲ್ಕಕ್ಕೂ ಹೆಚ್ಚು ಕೊಲೆ ಪ್ರಕರಣಗಲ್ಲಿ ಭಾಗಿಯಾಗಿ ಜೈಲೂಟ ಸವಿದಿದ್ದ.

ಸದ್ಯ ಈತನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲೇ ದುಷ್ಕರ್ಮಿಗಳು ಕೊಲೆ ನಡೆಸಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಪೊಲೀಸರು ರೌಡಿಗಳಿಗೆ ಕಾನೂನಿನ ರುಚಿ ತೋರಿಸಬೇಕಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply