ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವು!

ತೀವ್ರವಾದ ಮಳೆಯಿಂದಾಗಿ ಅನಾಹುತಗಳ ಸರಮಾಲೆಯೇ ನಡೆಯುತ್ತಿದ್ದು, ಅದೆಷ್ಟೋ ಸಾವು-ನೋವುಗಳು ಸಂಭವಿಸಿದೆ. ಮಳೆಯ ನಡುವೆ ವಿದ್ಯುತ್ ಸಮಸ್ಯೆಗಳು ಎದುರಾಗುತ್ತಿದ್ದು, ಇಲ್ಲೊಂದು ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಅಹ್ಮದ್, ಪರ್ವೀನ್ ಮತ್ತು ಅವರ ಮಕ್ಕಳಾದ ಅದ್ನಾನ್ ಮತ್ತು ಮಹಿಮ್ ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇಬ್ಬರು ಮಕ್ಕಳು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಕ್ಕೀಡಾಗಿದೆ. ಈ ವೇಳೆ ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಧಾವಿಸಿದಾಗ, ಅವರಿಗೂ ವಿದ್ಯುತ್ ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕಾಮರೆಡ್ಡಿ ಜಿಲ್ಲೆಯ ದೇವನಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬೀಡಿ ಕಾಲೋನಿಯಲ್ಲಿ ಮಂಗಳವಾರ ನಡೆದಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ.

error: Content is protected !!
Scroll to Top
%d bloggers like this: