“ಹಿಂದೂ ದೇವತೆ” ಗಳ ಚಿತ್ರವಿರುವ ಪೇಪರ್‌ನಲ್ಲಿ ಚಿಕನ್ ಮಾರಾಟ | ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ
ಚಾಕುವಿನಿಂದ ದಾಳಿ ಆರೋಪ, ವ್ಯಕ್ತಿ ಬಂಧನ !

ಹಿಂದೂ ದೇವತೆಗಳ ಚಿತ್ರವಿರುವ ಪತ್ರಿಕೆಯಲ್ಲಿ ಚಿಕನ್ ಹಾಕಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಈತ ಪೊಲೀಸ್‌ ತಂಡದ ಮೇಲೆ ದಾಳಿ ಕೂಡ ಮಾಡಿದ್ದ ಎಂದು ಆರೋಪಿಸಲಾಗಿದೆ.

 

ಈ ಘಟನೆ ಭಾನುವಾರ ನಡೆದಿದೆ. ಮಾಂಸ ವ್ಯಾಪಾರಿ ತಾಲಿಬ್ ಹುಸೇನ್ ಎಂಬಾತ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಿರುವ ಪತ್ರಿಕೆಯ ತುಣುಕಿನಲ್ಲಿ ತನ್ನ ಅಂಗಡಿಯಲ್ಲಿ ಚಿಕನ್ ಮಾಂಸ ಹಾಕಿ ಮಾರುತ್ತಿದ್ದ ಎಂದು ಕೆಲವು ವ್ಯಕ್ತಿಗಳು ದೂರಿದ್ದಾರೆ. ಹಾಗೂ ಇದು ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಅಂಗಡಿಗೆ ತೆರಳಿದಾಗ ತಾಲಿಬ್ ಹುಸೇನ್ ನನ್ನು ಬಂಧಿಸಲು ಹೋದಾಗ, ಪೊಲೀಸರನ್ನು ಸಾಯಿಸುವ ಉದ್ದೇಶದಿಂದ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ಕೂಡಾ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ತಾಲಿಬ್ ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ ಹಿನ್ನೆಲೆಯಲ್ಲಿ ವಿಭಿನ್ನ ಗುಂಪುಗಳ ಮಧ್ಯೆ ವೈರತ್ವ ಪ್ರಚಾರ ಮಾಡುವುದು), ಸೆಕ್ಷನ್ 295 ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಗೆ ಅವಮಾನ ಮಾಡುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಉದ್ದೇಶಪೂರ್ವಕ ಮತ್ತು ಕೇಡಬುದ್ಧಿಯ ಕೃತ್ಯಗಳು) 307 (ಕೊಲೆ ಪ್ರಯತ್ನ) ಪ್ರಕರಣಗಳನ್ನು ದಾಖಲಿಸಲಾಗಿದೆ.

Leave A Reply

Your email address will not be published.