Day: July 5, 2022

ಡಾಕ್ಟರೇಟ್ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ

ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ಬ್ಯುಸಿ ಆಗಿದ್ದಾರೆ. ಅವರಿಗೆ ಡಾಕ್ಟಾರೇಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ನಟಿ ಪ್ರಿಯಾಂಕಾಗೆ, ಕಲೆ ಮತ್ತು ಸಾಮಾಜಿಕ ಕಾರ್ಯಕ್ಕೆ ಡಾಕ್ಟರೇಟ್ ಸಿಕ್ಕಿದೆ. ಈ ಗೌರವ ನೀಡಿರುವುದು ಅವರಿಗೆ ತುಂಬಾನೇ ಖುಷಿಯಾಗಿದ್ದು, ನನಗೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಿವೆ ಎಂದಿದ್ದಾರೆ. ಅನೇಕ ಸಿನಿಮಾಗಳಲ್ಲಿ ಪ್ರಿಯಾಂಕಾ ತೊಡಗಿಕೊಂಡಿದ್ದಾರೆ. ಡಾಕ್ಟರೇಟ್ ಸಿಕ್ಕಿರಿವುದು ಉಪೇಂದ್ರ ಅವರ ಮನೆಯಲ್ಲಿ ಸಂತೋಷ ತಂದಿದೆಯೆಂದು ಪ್ರಿಯಾಂಕಾ ಅವರು ಮಾತನಾಡಿದ್ದಾರೆ.

ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್- ಇದರ ವಿಶೇಷತೆ ಏನು ಗೊತ್ತಾ!

ನವದೆಹಲಿ : ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ತೊತಾಪುರಿ, ಬಾದಾಮಿ, ರಸಾಪುರಿ, ಸೆಂದೋರ, ಇತರೆ ತಳಿಯ ಮಾವಿನ ಹಣ್ಣುಗಳುನ್ನು ನೀವು ಕೇಳಿರಬಹುದು. ಆದರೆ ಇದೀಗ ಕೈಗಾರಿಕೋದ್ಯಮಿ ಹರ್ಷ ಗೊಯೆಂಕ ಅವರು ಅತ್ಯಂತ ದುಬಾರಿ ಬೆಲೆಯ ತಳಿಯ ಮಾವಿನ ಹಣ್ಣಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಧ್ಯ ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಹೌದು. ಜಪಾನ್ ನಲ್ಲಿ ಮಿಯಾಜಾಕಿ ಎಂಬ ಮಾವಿನ ತಳಿಯನ್ನು ಬೆಳೆಸಲಾಗುತ್ತಿದೆ. ಭಾರತದಲ್ಲಿ ಈ ಮಾವಿನ ಹಣ್ಣು ಬೆಳೆಸುವುದು …

ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್- ಇದರ ವಿಶೇಷತೆ ಏನು ಗೊತ್ತಾ! Read More »

ಭಾರೀ ಮಳೆ ಹಿನ್ನೆಲೆ : ದ.ಕ,ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ

ದ.ಕ : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆ (ಜು.6) ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದುವರಿದ ಮಳೆ: ಶಾಲಾಕಾಲೇಜಿಗೆ ನಾಳೆಯೂ ರಜೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು.6) ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದಾರೆ. ಹವಮಾನ ಇಲಾಖೆಯ ಮನ್ಸೂಚನೆಯಂತೆಹಾಗೂ ಪ್ರಸ್ತುತ ಜಿಲ್ಲೆಯ …

ಭಾರೀ ಮಳೆ ಹಿನ್ನೆಲೆ : ದ.ಕ,ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ(ಜು.6) ರಜೆ Read More »

ಸುಳ್ಯ: ಪೌರ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ದುಗಳಡ್ಕದಲ್ಲಿ ನಡೆದಿದೆ.ಆತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿ ದುಗಳಡ್ಕದ ನಿರೆಬಿದಿರೆ ನಿವಾಸಿ ದೇವನಾಥ್ ಎಂಬುದಾಗಿ ತಿಳಿದು ಬಂದಿದೆ. ನಗರ ಪಂಚಾಯತ್ ನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ನಿನ್ನೆ ವಿಷ ಕುಡಿದಿದ್ದು ತಕ್ಷಣ ಸ್ನೇಹಿತರು ಸುಳ್ಯದ ಆಸ್ಬತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಆಸ್ಪತ್ರೆಗೆ ಗೆ ದಾಖಲು ಮಾಡಿಸಿದರೂ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಎಲ್ಲಿ ಹಾಗೂ ಎಂದು ?

ಚಂದ್ರಶೇಖರ್‌ ಗುರೂಜಿ ಅಂತ್ಯಸಂಸ್ಕಾರ ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ಗುರೂಜಿಯವರ ಸ್ವಂತ ಜಮೀನಿನಲ್ಲಿ ಮಾಡಲಾಗುತ್ತದೆ ಈ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚಿಸಲಾಗಿದೆ ಎಂದು ಪರಿಚಯಸ್ಥರೊಬ್ಬರು ಹೇಳಿದ್ದಾರೆ. ‘ಚಂದ್ರಶೇಖರ್‌ ಗುರೂಜಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಳ್ಳ ಗ್ರಾಮದ ರಸ್ತೆಯ ಜಮೀನಿನಲ್ಲಿ ನಡೆಯಲಿದೆ. ಎಂದು ಪರಿಚಯಸ್ಥ ಮೋಹನ ಲಿಂಬಿಕಾಯಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯೂ ನಾಳೆ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.  ಗುರೂಜಿಯವರಿಗೆ ಬಹಳಷ್ಟು ಅನುಯಾಯಿಗಳಿದ್ದು, ದೇಶದ ಬೇರೆ ಬೇರೆ ಕಡೆಗಳಲ್ಲೂ ಅನುಯಾಯಿಗಳಿದ್ದಾರೆ. ಹಾಗಾಗಿ ಅವ್ರು ನಾಳೆ …

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಎಲ್ಲಿ ಹಾಗೂ ಎಂದು ? Read More »

ಬೈಂದೂರು : KSRTC ಬಸ್ಸಿಗೆ ಕಾರು ಡಿಕ್ಕಿ, ಓರ್ವ ಗಂಭೀರ

ಬೈಂದೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆಯಲ್ಲಿ ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದ ಬಸ್ಸಿಗೆ, ಹಿಂದಿನಿಂದ ಶಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದ್ದು. ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಳುಗಳನ್ನು ಆಸ್ಬತ್ರೆ ಗೆ ದಾಖಲಿಸಿದ್ದು, ಸ್ಥಳಕ್ಕೆ ಬೈಂದೂರು ಠಾಣೆಯ ಪಿ ಎಸ್ಐ ಪವನ್ ನಾಯಕ್ ಭೇಟಿ ನೀಡಿದ್ದು, ಬೈಂದೂರು …

ಬೈಂದೂರು : KSRTC ಬಸ್ಸಿಗೆ ಕಾರು ಡಿಕ್ಕಿ, ಓರ್ವ ಗಂಭೀರ Read More »

ಕಾರ್ಕಳದಿಂದ ನಾಪತ್ತೆಯಾಗಿದ್ದ ಅಜ್ಜಿ ಬೆಳ್ತಂಗಡಿಯಲ್ಲಿ ಪತ್ತೆ!

ಬೆಳ್ತಂಗಡಿ : ಭಾನುವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಕಾರ್ಕಳದ ಅಜ್ಜಿ, ಬೆಳ್ತಂಗಡಿ 112 ಪೊಲೀಸರ ಸಹಾಯದಿಂದ ಸೋಮವಾರ ರಾತ್ರಿ ಮರಳಿ ಮನೆ ಸೇರಿದ್ದಾರೆ. ನಾಪತ್ತೆಯಾಗಿ ಪತ್ತೆಯಾದವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಗುಡ್ಡೆಯ ಹಳೆಕಟ್ಟೆ ನಿವಾಸಿಯಾಗಿರುವ ಸಾವಿತ್ರಿ ಭಟ್ (82). ಇವರಿಗೆ ಮೂವರು ಮಕ್ಕಳಿದ್ದು, ಇಬ್ಬರು ಸತೀಶ್ ಭಟ್ ಮತ್ತು ರಮೇಶ್ ಭಟ್ ಗಂಡು ಮಕ್ಕಳು ಹಾಗೂ ಒಬ್ಬಳು ಮಗಳಾದ ವಿಜಯ ಭಟ್. ಮಗಳನ್ನು ಬೆಳ್ತಂಗಡಿಯ ಕಳಿಯ ಗ್ರಾಮದ ನಾಳಕ್ಕೆ ಮದುವೆ ಮಾಡಿಕೊಡಲಾಗಿದ್ದು. ಸಾವಿತ್ರಿ ಸತೀಶ್ ಜೊತೆ ಹಳೆಕಟ್ಟೆಯಲ್ಲಿ …

ಕಾರ್ಕಳದಿಂದ ನಾಪತ್ತೆಯಾಗಿದ್ದ ಅಜ್ಜಿ ಬೆಳ್ತಂಗಡಿಯಲ್ಲಿ ಪತ್ತೆ! Read More »

Breaking | ಗುಜರಾತ್-ಮುಂಬೈ Spicejet ವಿಮಾನದಲ್ಲಿ ಕಿಟಕಿ ಬಿರುಕು, ದಿಢೀರ್‌ ತುರ್ತು ಭೂಸ್ಪರ್ಶ

ಮುಂಬೈ: ಗುಜರಾತ್ನ ಕಾಂಡ್ಲಾದಿಂದ ಮಹಾರಾಷ್ಟ್ರದ ಮುಂಬೈಗೆ ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವು ( SpiceJet aircraft ) ಅದರ ಹೊರ ವಿಂಡ್ಶೀಲ್ಡ್ನಲ್ಲಿ ( windshield ) ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೀಗೆ ಸ್ಪೈಸ್ ಜೆಟ್ ವಿಮಾನವು ತುರ್ತು ಭೂಸ್ಪರ್ಶ ( emergency landing ) ಮಾಡಿದ್ದು, ಇಂದಿನ ಒಂದೇ ದಿನದಲ್ಲಿ ಇದು ಎರಡನೇ ಘಟನೆಯಾಗಿದೆ.ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.“ಎಫ್ಎಲ್ 230 ನಲ್ಲಿ …

Breaking | ಗುಜರಾತ್-ಮುಂಬೈ Spicejet ವಿಮಾನದಲ್ಲಿ ಕಿಟಕಿ ಬಿರುಕು, ದಿಢೀರ್‌ ತುರ್ತು ಭೂಸ್ಪರ್ಶ Read More »

ಭಾರೀ ಮಳೆ, ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ ಶಾಲಾ ಕಾಲೇಜುಗಳಿಗೆ ನಾಳೆ ( ಜು.6) ರಂದು ರಜೆ !

ಕರಾವಾಳಿಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಇಂದು ( ಜು.5) ದ.ಕ.ದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಷ್ಟು ಮಾತ್ರವಲ್ಲದೇ, ಎರಡು ದಿನ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಇತ್ತ ಕಡೆ ಕಾಫಿ ನಾಡು ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜುಲೈ 6 ( ನಾಳೆ) ಬುಧವಾರ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ …

ಭಾರೀ ಮಳೆ, ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ ಶಾಲಾ ಕಾಲೇಜುಗಳಿಗೆ ನಾಳೆ ( ಜು.6) ರಂದು ರಜೆ ! Read More »

ಶಾಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬಾಲಕಿ ಸಾವು!

ಚಿಕ್ಕೋಡಿ: ವಿದ್ಯುತ್ ವಯರ್ ತಗುಲಿ ಶಾಲೆಯಲ್ಲಿಯೇ ಪುಟ್ಟ ಬಾಲಕಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಡೋಣೆವಾಡಿಯಲ್ಲಿ ನಡೆದಿದೆ. ಅನುಷ್ಕಾ ಸದಾಶಿವ ಬೆಂಡೆ (9 ವರ್ಷ) ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾದ ವಿದ್ಯಾರ್ಥಿನಿ. ಘಟನೆಯ ಹಿನ್ನೆಲೆ ಶಾಲಾ ಮುಖ್ಯೋಪಾಧ್ಯಾಯ ಕುಮಾರ್ ನಾಟೇಕರ್‌ನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

error: Content is protected !!
Scroll to Top