ಅದೃಷ್ಟ ಎಂದರೆ ಇದೇ ಅಂತ ಹೇಳಬಹುದಾ? ಹೌದು ಅಂತ ಈ ಘಟನೆಯಿಂದ ಈ ರೀತಿಯಲ್ಲೂ ಅದೃಷ್ಟ ಒಲಿಯುತ್ತೆ ಅಂತ ಹೇಳಬಹುದು. ಏಕೆಂದರೆ ಇಲ್ಲೊಬ್ಬ ವ್ಯಕ್ತಿಗೆ ಕನಸಲ್ಲಿ ನಂಬರೊಂದು ಕಂಡಿದ್ದು, ಅದೇ ನಂಬರಿನ ಲಾಟರಿ ಟಿಕೆಟ್ ಖರೀದಿಸಿದ್ದಾನೆ. ಆಶ್ಚರ್ಯಕರ ಸಂಗತಿ ಏನೆಂದರೆ, ಅದೇ ಲಾಟರಿ ನಂಬರಿಗೆ ಬಂಪರ್ ಪ್ರೈಸ್ ಬಂದಿದೆ.
ಅಮೆರಿಕದ ಒಬ್ಬ ವ್ಯಕ್ತಿ ಕನಸಲ್ಲಿ ಕಂಡ ಸಂಖ್ಯೆಯನ್ನು ಬಳಸಿಕೊಂಡು ಟಿಕೆಟ್‌ಗಳನ್ನು ಖರೀದಿಸಿದ್ದು ಆ ಲಾಟರಿಗೆ $250,000 ಬಹುಮಾನ ಬಂದಿದೆ. ಹೌದು ಈತನ ಅದೃಷ್ಟ ಬಹಳ ಚೆನ್ನಾಗಿದೆ ಅಂತಾನೇ ಹೇಳಬಹುದು.
ವರ್ಜೀನಿಯಾದ ಅಲೋಂಜೊ ಕೋಲ್‌ಮನ್ ಅವರು ಕಾರ್ನರ್ ಮಾರ್ಟ್ನಿಂದ ಟಿಕೆಟ್ ಖರೀದಿಸಿದ್ದಾರೆ ಎಂದು ಎನ್‌ಬಿಸಿ ಅಂಗಸಂಸ್ಥೆ ಸ್ಥಳೀಯ ಡಬ್ಲ್ಯುಡಬ್ಲ್ಯೂಬಿಟಿ ವರದಿ ಮಾಡಿದೆ. ಕೋಲ್‌ಮನ್ $2ಗೆ ಟಿಕೆಟ್ ಖರೀದಿಸಿದ್ದು ಅದಕ್ಕೆ ಸಿಕ್ಕಿದ 250,000 ಡಾಲರ್ ಬಹುಮಾನ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಇದು ನಂಬಲು ನಿಜವಾಗಲೂ ಕಷ್ಟವಾಗಿತ್ತು’ ಎಂದು ಈ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ. ಕೋಲ್‌ಮನ್ ಜೂನ್ 11 ರಂದು ಟಿವಿಯಲ್ಲಿ ಲಾಟರಿ ಡ್ರಾ ಮಾಡುತ್ತಿರುವುದನ್ನು ನೋಡುತ್ತಿದ್ದಾಗ ಅವರ ಟಿಕೆಟ್‌ನಲ್ಲಿನ ಸಂಖ್ಯೆ ಅನುಕ್ರಮ – 13, 14, 15, 16, 17 ಮತ್ತು 18 –
ಹೊಂದಾಣಿಕೆಯಾಗಿರುವುದನ್ನು ನೋಡಿದ್ದಾರೆ.
ಬೋನಸ್ ಸಂಖ್ಯೆ 19 ಕೂಡ ಇತ್ತು ಆದರೆ ಮೊದಲ ಆರು ಸಂಖ್ಯೆಗಳು ದೊಡ್ಡ ಮೊತ್ತವನ್ನು ಗೆಲ್ಲಲು ಸಹಾಯ ಮಾಡಿತು. ಗುರುವಾರ ಲಾಟರಿ ಫಲಿತಾಂಶ ಪ್ರಕಟವಾಗಿದೆ.
ಕೋಲ್‌ಮನ್ ಅವರ ವಯಸ್ಸೆಷ್ಟು ಎಂದು ಗೊತ್ತಿಲ್ಲ ಆದರೆ ಅವರು ನಿವೃತ್ತರಾಗಿದ್ದಾರೆ. ಲಾಟರಿ ಸಂಖ್ಯೆಯನ್ನು ಅವರು ಕನಸಲ್ಲಿ ಕಂಡಿದ್ದರು ಎಂದು ಅವರು ಲಾಟರಿ ಅಧಿಕಾರಿಗೆ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವರ್ಜೀನಿಯಾ ಲಾಟರಿಯು $250,000 ಚೆಕ್ ಹಿಡಿದು ಹರ್ಷೋದ್ಗಾರ ಮಾಡುತ್ತಿರುವ ಕೋಲ್‌ಮನ್‌ನ ಫೋಟೊ ಬಿಡುಗಡೆ ಮಾಡಿದೆ.
You must log in to post a comment.