ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಂಖ್ಯೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿಯಾಗಿದ್ದು, ಇದನ್ನು ನಾವು ಮನೆಯಲ್ಲಿಯೇ ಪರಿಹರಿಸಿ ಕೊಳ್ಳಬಹುದು.
ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಕಮ್ಮಿ ಮಾಡಬಹುದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು .
ವಾಸ್ತವವಾಗಿ ಹೆಚ್ಚಿನ ಜನರು ಕಳಪೆ ಆಹಾರ ಪದಾರ್ಥಗಳಿಂದ ಮಧುಮೇಹಕ್ಕೆ ಗುರಿಯಾಗುತ್ತಾರೆ.
ಹೀಗೆ ಆದ ಸಂದರ್ಭದಲ್ಲಿ ಕೆಲವರು ನೈಸರ್ಗಿಕವಾಗಿ ವಿಧಾನಗಳಿಂದ ಪರಿಹಾರ ಬಳಸಿದರೆ, ಇನ್ನು ಕೆಲವರು ಔಷಧಿಗಳನ್ನು ಬಳಸುತ್ತಾರೆ.
ನೈಸರ್ಗಿಕ ವಿಧಾನಗಳಿಂದ ಮಧುಮೇಹ ಕಡಿಮೆ ಮಾಡಬಹುದು :
ತುಳಸಿ ಎಲೆ: ಇದು ರಕ್ತದಲ್ಲಿನ ಸಕ್ಕರೆ ನಿಲ್ಲಿಸಬಹುದು, ಇದು ಮಧುಮೇಹಕ್ಕೆ ಉತ್ತಮ ಮನೆಮದ್ದು. ತುಳಸಿ ಎಲೆಗಳು ಆಂಟಿ ಆಕ್ಸಿಡೆಂಟ್ ಒಳಗೊಂದಿರುತ್ತದೆ ಹಾಗೂ ಇನ್ಸೂಲಿನ್ ಹೆಚ್ಚು ಉತ್ಪಾದನೆ ಮಾಡಿ ಗ್ಲುಕೋಸ್ ಕಮ್ಮಿ ಮಾಡುತ್ತದೆ.
ಮಾವಿನ ಎಲೆಗಳು: ಈ ಎಲೆ ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್’ ಸಿ ‘, ವಿಟಮಿನ್’ ಎ ‘,ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಈ ಎಲೆಗಳು ಇನ್ಸೂಲಿನ್ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ.
ಜಾಮೂನ್ ಬೀಜಗಳು : ಸಾಮಾನ್ಯವಾಗಿ ಜಾಮೂನ್ ಅಥವಾ ನೇರಳೆ ಹಣ್ಣು ತಿಂದು ಬೀಜ ಎಸೆಯುತ್ತೇವೆ. ಆದರೆ ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದರ ಬೀಜದ ಪುಡಿ ಚಾ ಅಥವಾ ನೀರಿಗೆ ಹಾಕಿ ಕುಡಿಯುವುದರಿಂದ ಮಧು ಮೇಹ ತಡೆಗಟ್ಟ ಬಹುದು.