ಹೆಚ್ಚು “ಬ್ಲೂಫಿಲಂ” ನೋಡುವವರು ದೇವರ ಪೂಜೆ ಹೆಚ್ಚು ಮಾಡ್ತಾರಂತೆ, ಏನಿದು ವಿಚಿತ್ರ?

ಸೆಕ್ಸ್ ಎಂಬುದರ ಬಗ್ಗೆ ಭಾರತದಲ್ಲಿ ಸಾರ್ವಜನಿಕವಾಗಿ ದಲ್ಲಿ ಸಾರ್ವಜನಿಕ ಹೇಳೋದಿಲ್ಲ. ಅಂತ ಮಡಿವಂತಿಕೆ ನಮ್ಮ ಭಾರತದಲ್ಲಿ ಇದೆ. ಆದರೆ ಭಾರತದಲ್ಲಿ ಕದ್ದು – ಮುಚ್ಚಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆಗೇನೂ ಕಡಿಮೆಯೇನಿಲ್ಲ.

ಇದೇ ಕಾರಣಕ್ಕೆ ಈ ಉದ್ಯಮ ಹೆಚ್ಚು ಅಭಿವೃದ್ಧಿ ಕಂಡಿದೆ ಎಂದರೆ ತಪ್ಪಾಗಲಾರದು. ಯಾರಾದರೂ ಸಾಮಾನ್ಯವಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿದರೆ ನಾವು ಮೂಗು ಮುರಿತೇವೆ. ಹಾಗೆ ಅವರಿಗೆ ಧರ್ಮದ ಬಗ್ಗೆ ದೇವರ ಬಗ್ಗೆ ನಂಬಿಕೆಯಿಲ್ಲ ಎಂದು ಮೂದಲಿಸುತ್ತೇವೆ. ಅಶ್ಲೀಲ ಚಿತ್ರ ವೀಕ್ಷಣೆ ಮಾಡುವುದು ದೇವರಿಗೆ ಮಾಡುವ ಅವಮಾನ ಎಂಬಂತೆ‌ ಮಾತಾಡುವ ಜನರೇ ಹೆಚ್ಚು.

ಸಾಮಾನ್ಯವಾಗಿ ಅಶ್ಲೀಲ ಚಿತ್ರಗಳ ಬಗ್ಗೆ ಮಾತನಾಡದೆ, ನೋಡದೇ ಇರೋ ವ್ಯಕ್ತಿ ದೇವರ ಮೇಲೆ ಅಪಾರ ನಂಬಿಕೆಯಿಟ್ಟಿದ್ದಾನೆ ಎಂದುಕೊಳ್ತವೆ. ಅಷ್ಟೇ ಅಲ್ಲ ಪೋರ್ನ್ ಸಿನಿಮಾಗಳನ್ನು ನೋಡುವ ವ್ಯಕ್ತಿ ಅಧರ್ಮದ ಕೃತ್ಯಗಳನ್ನು ಮಾಡುತ್ತಾರೆ ಎಂದು ಭಾವಿಸುವವರೂ ಇದ್ದಾರೆ. ಆದರೆ ದೇವರು ಹಾಗೂ ಪೋರ್ನ್ ಬಗ್ಗೆ ನಿಮಗಿರುವ ಆಲೋಚನೆಯನ್ನು ನೀವು ಬದಲಾಯಿಸಬೇಕು. ಯಾಕೆಂದ್ರೆ ನೀವು ಅಂದುಕೊಂಡಿದ್ದಕ್ಕೆ ವಿರುದ್ಧವಾಗಿದೆ ಎಂಬುದು ಸಮೀಕ್ಷೆಯಿಂದ ಹೊರ ಬಂದ ವರದಿ.

ಹೌದು, ಯಾರು ಹೆಚ್ಚು ಪೋರ್ನ್ ವೀಡಿಯೋ ನೋಡುತ್ತಾರೋ, ಅವರಲ್ಲೇ ಧಾರ್ಮಿಕತೆ ಹೆಚ್ಚು ಎನ್ನುತ್ತೆ ವರದಿ. ಯಸ್, ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪೋರ್ನ್ ವೀಕ್ಷಿಸುವ ಜನರಲ್ಲಿ ಧಾರ್ಮಿಕ ನಂಬಿಕೆ ಹೆಚ್ಚು. ವಾರಕ್ಕೊಮ್ಮೆ ಮಾತ್ರ ಪೋರ್ನ್ ನೋಡುವವರಿಗಿಂತ ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪೋರ್ನ್ ವೀಕ್ಷಣೆ ಮಾಡುವ ಜನರು ಹೆಚ್ಚು ಧಾರ್ಮಿಕರು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಶ್ಲೀಲ ಚಿತ್ರಗಳನ್ನು ನೋಡಿದರೆ ಪಾಪ, ಧರ್ಮದ ವಿರುದ್ಧದ ಕೆಲಸ ಎಂಬುದು ಎಲ್ಲರ ತಲೆಯಲ್ಲಿದೆ. ಹಾಗಾಗಿಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದವರು ಹೆಚ್ಚು ದೇವರ ಪ್ರಾರ್ಥನೆ ಮಾಡ್ತಾರೆಂದು ಸಂಶೋಧಕರು ಅಂದಾಜಿಸಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಿಸಿ ಪಾಪ ಮಾಡಿದ್ದೇವೆ ಎಂದು ಭಾವಿಸುವ ಜನರು ಧಾರ್ಮಿಕ ಕಾರ್ಯಗಳ ಮೂಲಕ ದೇವರ ಕ್ಷಮೆ ಕೇಳುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

1,300 ಅಮೆರಿಕನ್ನರ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. 6 ವರ್ಷಗಳ ಡೇಟಾವನ್ನು ವಿಶ್ಲೇಷಿಸಿದ ನಂತರ ಈ ವರದಿ ನೀಡಲಾಗಿದೆ. ಹೆಚ್ಚು ಅಶ್ಲೀಲತೆಯನ್ನು ವೀಕ್ಷಿಸುವ ಜನರು ಬಲವಾದ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದಾರೆ ಎಂದು ಸಂಶೋಧಕ ಸ್ಯಾಮ್ಯುಯೆಲ್ ಪೆರಿ ಹೇಳಿದ್ದಾರೆ.

ಸಾಂದರ್ಭಿಕವಾಗಿ ಪೋರ್ನ್ ಚಲನಚಿತ್ರಗಳನ್ನು ನೋಡುವವರಿಗಿಂತ ಪೋರ್ನ್ ವೀಕ್ಷಕರು ಹೆಚ್ಚು ದೇವರನ್ನು ಆರಾಧಿಸುತ್ತಾರೆ. ತಿಂಗಳಿಗೊಮ್ಮೆ ಪೋರ್ನ್ ಸಿನಿಮಾ ನೋಡುವವರು ಧರ್ಮ ಮತ್ತು ಪ್ರಾರ್ಥನೆಯ ಕಡೆಗೆ ಕಡಿಮೆ ಒಲವು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜರ್ನಲ್ ಆಫ್ ಸೆಕ್ಸ್ ರಿಸರ್ಚ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿತ್ತು. ಪೋರ್ನ್ ಫಿಲ್ಮ್ ನೋಡದವರು ತಮ್ಮ ಧರ್ಮದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಮತ್ತು ಅವರ ಮನಸ್ಸಿನಲ್ಲಿ ಧರ್ಮದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

Leave A Reply

Your email address will not be published.