ದೇವರ ಮುಂದೆ ಮಗನನ್ನು ಮಲಗಿಸಿದ ತಾಯಿ; ಕಾರಣ!?

ತಾಯಿ ಮತ್ತು ಮಗುವಿನ ಸಂಬಂಧವೇ ವಿಚಿತ್ರ. ಆಕೆಯ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ಇಂತಹ ವಿಶಾಲ ಹೃದಯದ ತಾಯಿ ತನ್ನ ಕರುಳಬಲ್ಲಿಗೇನಾದರೂ ಆದರೆ ಸಹಿಸುವಳೇನು!?.. ಆಕೆಯ ಪ್ರಾಣ ತೆತ್ತಾದರೂ ಮಗುವಿನ ಪ್ರಾಣ ಉಳಿಸುವಳು. ಅಂತಹುದೇ ಒಂದು ತಾಯಿ-ಮಗನ ವಾತ್ಸಲ್ಯದ ಹೃದಯಕಲ್ಲಾಗಿಸುವಂತಹ ಘಟನೆ ಬೆಳಗಾವಿ ಜಿಲ್ಲೆಯ ನಂದಗಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಷ್ಟ ಬಂದಾಗ ತನ್ನಿಂದ ಮುಂದೇನು ಮಾಡಲು ಅಸಾಧ್ಯವೆಂದಾಗ ಎಲ್ಲರೂ ಹೋಗುವುದು ದೇವರ ಬಳಿ. ಅಂತೆಯೇ ಈ ಮಹಾತಾಯಿ ಕೋಮಾದಲ್ಲಿರುವ ತನ್ನ ಎಂಟು ವರ್ಷದ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋಗಿರುವ ಘಟನೆ ನಡೆದಿದೆ.

ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬಾರ್ದ ಗ್ರಾಮದ ಶೈಲೇಶ್ ಕೃಷ್ಣಾ ಸೂತ್ರವಿ ಎಂಬ ಬಾಲಕ ಮೆದುಳಿನ ಸಮಸ್ಯೆಯಿಂದಾಗಿ ಕೋಮಾದಲಿದ್ದಾನೆ. ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದ ಶೈಲೇಶ್‌ನನ್ನು, ತಾಯಿ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿರುವ ಪ್ರಸಿದ್ಧ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿ ಮಗನ ಪ್ರಾಣ ಉಳಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಶೈಲೇಶ್ ಪಾರ್ಶ್ವವಾಯು ಆಗಿದ್ದರಿಂದ ಆತನ ದೇಹ ಸ್ವಾಧೀನ ಕಳೆದುಕೊಂಡಿದೆ. ‌ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಖ್ಯಾತ ವೈದ್ಯರ ಬಳಿ ಶೈಲೇಶ್​ಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ವೈದ್ಯರ ಪ್ರಯತ್ನ ಕೈಗೂಡದಿರುವ ಹಿನ್ನೆಲೆ ಹೆತ್ತಮ್ಮ ದೇವರ ಮೊರೆ ಹೋಗಿದ್ದಾರೆ. ಒಟ್ಟಾರೆ ಆಕೆಯ ಅಳಲಿನ ಪ್ರಾರ್ಥನೆ ಫಲಿಸಿ ಬಾಲಕ ಬದುಕುಳಿಯಲಿ ಎಂಬುದೇ ಬೇಡಿಕೆ..

Leave A Reply