ವಾದ್ಯದವರಿಗೆ ಹಣ ನೀಡಿಲ್ಲವೆಂದು ಮದುವೆ ಮಂಟಪದಿಂದ ಹೊರ ನಡೆದ ವರ!!! ವಧು ಮಾಡಿದ್ದೇನು ಗೊತ್ತೇ?

ಈ ಜಗತ್ತಿನಲ್ಲಿ ಯಾವ್ ಯಾವುದೋ ವಿಷಯಕ್ಕೆ ಮದುವೆ ವಿಷಯಗಳು ಮುರಿದು ಬೀಳುತ್ತೆ. ವರದಕ್ಷಿಣೆ, ಊಟೋಪಚಾರ, ಅಷ್ಟು ಮಾತ್ರವಲ್ಲದೇ ಹುಡುಗ ಓದಿಲ್ಲ ಅಂತನೋ ಕೊನೇ ಕ್ಷಣದಲ್ಲಿ ಕೂಡಾ ಮದುವೆ ಮುರಿದು ಬೀಳುವ ಸಂಭವಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಮದುವೆ ಪ್ರಸಂಗ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮದುವೆ ಬಿದ್ದಿದೆ.

ವಾದ್ಯದವರಿಗೆ ಹಣ ಪಾವತಿಸುವ ವಿಚಾರದಲ್ಲಿ ವಧು ಮತ್ತು ವರನ ಕಡೆಯವರ ನಡುವೆ ವಿವಾದ ನಡೆದಿದ್ದು, ಕೊನೆಗೆ ವರ ಮಂಟಪದಿಂದ ಹೊರನಡೆದಿದ್ದಾನೆ. ಇದರ ಪರಿಣಾಮ ಮದುವೆ ಮುರಿದು ಬಿದ್ದಿದೆ. ಈ ಘಟನೆ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ವಿವಾಹ ಮಂಟಪದಲ್ಲಿ ವಿಧಿ, ವಿಧಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ವಾದ್ಯ ವೃಂದದವರು ವರನ ಕಡೆಯವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ವರನ ಕಡೆಯವರು ನಾವು ಹಣ ಕೊಡುವುದಿಲ್ಲ ಅದನ್ನು ವಧುವಿನ ಕಡೆಯವರು ನೀಡುತ್ತಾರೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ಹಣದ ವಿಚಾರದಲ್ಲಿ ವರ ಮತ್ತು ವಧುವಿನ ಸಂಬಂಧಿಗಳ ನಡುವೆ ವಾಗ್ವಾದ ನಡೆದಿದ್ದು, ಇದರಿಂದಾಗಿ ತಮ್ಮ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ, ವರ ಮಂಟಪದಿಂದ ಹೊರ ನಡೆದಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಬ್ಯಾಂಡ್ ನವರಿಗೆ ಹಣ ನೀಡುವ ವಿಚಾರದಲ್ಲಿ ವಿವಾಹ ಮುರಿದು ಬಿದ್ದಿದ್ದರಿಂದ ವಧುವಿನ ಸಂಬಂಧಿಗಳು ಕೂಡಾ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಧರ್ಮೇಂದ್ರ ಎಂಬುವರು ಫರೂಖಾಬಾದ್ ನ ಕಂಪಿಲ್ ನಿಂದ ಮಿರ್ಜಾಪುರಕ್ಕೆ ಬ್ಯಾಂಡ್ (ವಾದ್ಯ)ದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದವರು ಎಂದು ಮಿರ್ಜಾಪುರ ಪೊಲೀಸ್ ಠಾಣಾಧಿಕಾರಿ ಅರವಿಂದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: