‘ಮಿಸ್ ಯೂ’ ಎಂದು ಮಹಿಳೆಗೆ ಸಂದೇಶದ ಕಳಿಸಿದ ಸ್ವಿಗ್ಗಿ ಡೆಲಿವರಿ ಬಾಯ್; ಮುಂದೇನಾಯ್ತು ಗೊತ್ತಾ?

ಗ್ರಾಹಕರ ಸುರಕ್ಷತೆ ಹಾಗೂ ಗೌಪ್ಯತೆಗೆ ಆದ್ಯತೆ ನೀಡುವ ಫುಡ್ ಹಾಗೂ ಗ್ರೋಸರಿ ಡೆಲಿವರಿ ಕಂಪನಿ ಸ್ವಿಗ್ಗಿ ಈಗ ಡೆಲಿವರಿ ಏಜೆಂಟ್ ಮಾಡಿದ ಕೆಲಸವೊಂದರ ಕಾರಣಕ್ಕೆ ಈಗ ಮುಜುಗರಕ್ಕೆ ಸಿಲುಕಿದೆ.

ಸ್ವಿಗ್ಗಿಯಿಂದ ಗ್ರೋಸರಿ ಖರೀದಿಸಿದ್ದ ಮಹಿಳೆಯೋರ್ವರಿಗೆ, ಡೆಲಿವರಿ ಬಾಯ್, ಮಿಸ್ ಯೂ, ಯೂ ಆರ್ ಬ್ಯೂಟಿಫುಲ್, ವಂಡರ್ಫುಲ್ ಮೊದಲಾದ ಸಂದೇಶಗಳನ್ನು ಮಹಿಳೆಯ ಮೊಬೈಲ್ ಗೆ ಸಂದೇಶ ಕಳುಹಿಸಿದ್ದು ಅವರು ಹೌಹಾರಿದ್ದಾರೆ.

ಗ್ರಾಹಕರ ಖಾಸಗಿತನ ಕಾಪಾಡುವ ಉದ್ದೇಶದಿಂದ ಸ್ವಿಗ್ಗಿ, ತನ್ನ ಗ್ರಾಹಕರ ಮೊಬೈಲ್ ನಂಬರ್ ಗಳಿಗೆ ಮಾಸ್ಕ್ ಮಾಡುತ್ತಿದ್ದು, ಆದರೂ ಕೂಡಾ ಆ ಡೆಲಿವರಿ ಬಾಯ್ ಗೆ ಮಹಿಳೆಯ ಮೊಬೈಲ್ ನಂಬರ್ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ.

ಅಂದ ಹಾಗೇ ಈ ಮಹಿಳೆ ಡೆಲಿವರಿ ಏಜೆಂಟ್ ಗೆ ಕಾಂಟ್ಯಾಕ್ಟ್ ಮಾಡಲು ಮೊದಲಿಗೆ ಸ್ವಿಗ್ಗಿ ಆಪ್ ಬಳಸಿದ್ದು, ಆ ಬಳಿಕ ನೇರವಾಗಿಯೇ ತಮ್ಮ ಮೊಬೈಲ್ ನಿಂದ ಡೆಲಿವರಿ ಏಜೆಂಟ್ ಗೆ ಕರೆ ಮಾಡಿದ್ದರೆನ್ನಲಾಗಿದೆ. ಹೀಗಾಗಿ ಈ ನಂಬರ್ ಪಡೆದುಕೊಂಡ ಡೆಲಿವರಿ ಏಜೆಂಟ್ ಆಕೆಗೆ ಇಂತಹ ಸಂದೇಶಗಳನ್ನು ರವಾನಿಸಿದ್ದಾನೆಂದು ತಿಳಿದುಬಂದಿದೆ.

ಆ ಬಳಿಕ ಮಹಿಳೆ ಸ್ವಿಗ್ಗಿ ಗ್ರಾಹಕ ಸೇವಾ ವಿಭಾಗಕ್ಕೆ ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡಿದ್ದು, ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಾಕುತ್ತಿದ್ದಂತೆಯೇ ಈಗ ಖುದ್ದು ಸ್ವಿಗ್ಗಿ ಸಿಇಓ ಕಛೇರಿಯಿಂದಲೇ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಕೂಡಲೇ ತಪ್ಪಿತಸ್ಥ ಡೆಲಿವರಿ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

Leave A Reply

Your email address will not be published.