ಅಕ್ಕನ ಸಾವಿನ ನೋವು ಸಹಿಸಲಾಗದೆ ಉರಿಯುತ್ತಿದ್ದ ಚಿತೆಗೆ ಹಾರಿ ಸುಟ್ಟು ಕರಕಲಾದ ಸಹೋದರ!

ಅಕ್ಕನ ಸಾವಿನ ನೋವಿನಿಂದಲೇ ಅಂತ್ಯಸಂಸ್ಕಾರದ ವೇಳೆ ಚಿತೆಗೆ ನಮಸ್ಕರಿಸಲೆಂದು ಹೋದ ಸಹೋದರ ಉರಿಯುತ್ತಿದ್ದ ಬೆಂಕಿಗೆ ಹಾರಿ ಪ್ರಾಣಬಿಟ್ಟ ಮನಕಲಕುವ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

ಧಾರ್‌ನ ಉದಯ್ ಸಿಂಗ್ ಅವರ ಮಗ ಕರಣ್ ಡಾಂಗಿ(18) ಮೃತ ದುರ್ದೈವಿ. ಸಹೋದರಿ ಜ್ಯೋತಿ(21)ಎಂದು ಗುರುತಿಸಲಾಗಿದೆ.

ಕರಣ್​ರ ಚಿಕ್ಕಪನ ಮಗಳು ಜ್ಯೋತಿ(21) ಜೂ.9ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡಕಾಟ ನಡೆಸಿದರೂ ಆಕೆ ಸಿಕ್ಕಿರಲಿಲ್ಲ. ಮರುದಿನ ತೋಟದ ಬಾವಿಯಲ್ಲಿ ಜ್ಯೋತಿ ಶವ ಪತ್ತೆಯಾಗಿತ್ತು. ನಂತರ ಸಮೀಪದ ಸ್ಮಶಾನದಲ್ಲಿ ಜ್ಯೋತಿಗೆ ಅಂತಿಮ ವಿಧಿವಿಧಾನ ನಡೆದಿತ್ತು. ಅಕ್ಕನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದ ಕರಣ್​, ಸ್ಮಶಾನಕ್ಕೆ ಆಗಮಿಸಿದ್ದ. ಕುಟುಂಬಸ್ಥರು ಜ್ಯೋತಿಯ ಚಿತೆಗೆ ಬೆಂಕಿ ಇಟ್ಟು ಮನೆಯತ್ತ ಹೊರಟರು.

ಈ ವೇಳೆ ಉರಿಯುತ್ತಿದ್ದ ಚಿತೆಗೆ ನಮಸ್ಕರಿಸುವುದಾಗಿ ಹೋದ ಕರಣ್​, ಏಕಾಏಕಿ ಚಿತೆಗೆ ಹಾರಿದ್ದಾನೆ. ಇದನ್ನು ನೋಡಿದ್ದ ಗ್ರಾಮಸ್ಥರು ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆತನನ್ನು ರಕ್ಷಿಸಲು ಸ್ಥಳಕ್ಕೆ ದೌಡಾಯಿಸಿದ್ದರು. ಅಷ್ಟರಲ್ಲಿ ಕರಣ್​ ಸುಟ್ಟು ಕರಕಲಾಗಿದ್ದ. ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಣ್ ಮತ್ತು ಜ್ಯೋತಿ ತುಂಬಾ ಆತ್ಮೀಯರಾಗಿದ್ದು, ನಿತ್ಯ ಫೋನಿನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ರಕ್ಷಾಬಂಧನ ಹಬ್ಬಕ್ಕೆ ದೂರದೂರಿನಿಂದ ಬರುತ್ತಿದ್ದ ಕರಣ್, ಜ್ಯೋತಿ ರಾಖಿ ಕಟ್ಟುತ್ತಿದ್ದಳು. ಜೂ.9ರಂದು ಕರೆ ಮಾಡಿದ್ದ ಐಸ್​ ಕ್ರೀಂ ತರಲು ಹೇಳಿದ್ದ ಜ್ಯೋತಿ, ಸಂಜೆ ಕರಣ್ ಮನೆಗೆ ಬಂದಾಗ ಜ್ಯೋತಿ ಮನೆಯಲ್ಲಿ ಇರಲಿಲ್ಲ. ಜಮೀನಿಗೆ ಹೋದಾಕೆ ನಾಪತ್ತೆಯಾಗಿದ್ದು, ಮರುದಿನ ಬೆಳಗ್ಗೆ ಬಾವಿಯಲ್ಲಿ ಶವವಾಗಿದ್ದಳು. ಈ ವಿಚಾರ ತಿಳಿದು ಸುಮಾರು 430 ಕಿಮೀ ದೂರದಲ್ಲಿದ್ದ ಕರಣ್​, ತಂದೆ ಜೊತೆ ಬೈಕ್​ನಲ್ಲಿಯೇ ಬಂದಿದ್ದ. ಜೂ.11ರಂದು ಸ್ಮಶಾನದಲ್ಲಿ ಅಕ್ಕನ ಅಂತ್ಯಕ್ರಿಯೆ ನಡೆಯುತ್ತಿತ್ತು. ಈ ವೇಳೆ ಅಕ್ಕನ ಸಾವಿಂದ ಕಂಗೆಟ್ಟ ಕರಣ್​ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂದು ವಿವರಿಸುತ್ತಾ ಜ್ಯೋತಿಯ ಕಿರಿ ಸಹೋದರ ರಾಮ್​ರತನ್​ ಕಣ್ಣೀರು ಹಾಕಿದ್ದಾರೆ.

Leave A Reply

Your email address will not be published.