ಕೇಂದ್ರಕ್ಕೆ ಆಗಾಗ ವರದಿ ಕಳಿಸ್ತಾನೆ ಇದ್ದೇವೆ, ಸೂಕ್ತ ಸಮಯ ಬಂದಾಗ ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ನಿಷೇಧ !-ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ

ಉಡುಪಿ: ಕೇಂದ್ರಕ್ಕೆ ಆಗಾಗ ವರದಿ ಕಳುಹಿಸುತ್ತಾ ಇದ್ದೇವೆ. ಸೂಕ್ತ ಸಮಯ ಬಂದಾಗ ರಾಜ್ಯದಲ್ಲಿ ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿ ಮಾಜಿ ಶಾಸಕ, ರಾಜ್ಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ ಕೊಡ್ಡಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಈಡಿ ವಿಚಾರಣೆ ನಡೆಸುವ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ದೇಶದಲ್ಲಿ ಕಾಂಗ್ರೆಸ್ ನಾಯಕರಿಗೆ, ಜನಸಾಮಾನ್ಯರಿಗೆ ಒಂದು ಕಾನೂನು ಅಂತ ಇದೆಯಾ?. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕೋರ್ಟ್ ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ಕೊಡಬೇಕು. ನಿರಪರಾಧಿಯಾದರೆ ಹೊರಬರುತ್ತಾರೆ, ಅಪರಾಧಿಗಳಾದರೆ ಶಿಕ್ಷೆ ಅನುಭವಿಸುತ್ತಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತಿದೆ ಎಂದರು.


Ad Widget

Ad Widget

Ad Widget

Ad Widget

Ad Widget

Ad Widget

ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಮತಾಂಧ ಶಕ್ತಿಗಳು ನಮ್ಮ ನಡುವೆ ಇದ್ದಾವೆ. ಹಿಜಾಬ್ ನಿಂದ ಆರಂಭಿಸಿ ಏನೆಲ್ಲಾ ಮಾಡಿದ್ದಾರೆ ಎಲ್ಲರಿಗೂ ಗೊತ್ತು. ಇಂತಹ ಶಕ್ತಿಗಳನ್ನು ಮಟ್ಟ ಹಾಕಲು ಏನು ಮಾಡಬೇಕು ಎಂಬುವುದಾಗಿ ಚಿಂತನೆ ನಡೆಯುತ್ತಿದೆ. ಸೂಕ್ತ ಸಮಯ ಬಂದಾಗ ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಮಾಡುತ್ತೇವೆ. ಈ ಬಗ್ಗೆ ಕೇಂದ್ರಕ್ಕೆ ಆಗಾಗ್ಗೆ ವರದಿ ಕಳಿಸುತ್ತಾ ಇದ್ದೇವೆ ಎಂದರು.

ಬುಲ್ಡೋಜರ್ ಪ್ರಯೋಗದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯುಪಿ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡುವಂತಹ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ. ಇಲ್ಲಿ ಕಾನೂನನ್ನು ಪಾಲಿಸುವ ಮನಸ್ಥಿತಿ ಇನ್ನೂ ಉಳಿದುಕೊಂಡಿದೆ ಎಂದರು.

error: Content is protected !!
Scroll to Top
%d bloggers like this: