ಸುಜಾತಾ ಜೋಡಳ್ಳಿ ಚಿನ್ನದ ಹುಡುಗಿ.

ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಗೃಹಿಣಿ. ಮಹಾದೇವಿ ಅವರ ಪುತ್ರಿ ಸುಜಾತ ಜೋಡಳ್ಳಿ ಅವರು ಎಂ.ಎ. ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯದ 72ನೇ ಘಟಿಕೋತ್ಸವದಲ್ಲಿ ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.

ಕವಿವಿ 72 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಕೊಡಮಾಡುವ, ಕುಮಾರ ಮಹಾದೇವ ಸ್ವರ್ಣಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣಪದಕ, ಕೆ.ಎಂ.ರಾಜಶೇಖರಪ್ಪ ಹಿರೇಮಠ ಸ್ವರ್ಣಪದಕ, ಮೋಹರೆ ಹನುಮಂತರಾಯ್ ಸ್ವರ್ಣಪದಕ, ಕೆ.ಶಾಮರಾವ ಸ್ವರ್ಣಪದಕ, ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸ್ಮಾರಕ ಸ್ವರ್ಣಪದಕ, ಎಸ್. ವೀರೇಶ್ ನೀಲಕಂಠಶಾಸ್ತ್ರಿ ಸಂಗನಹಾಲ ಸ್ವರ್ಣಪದಕ, ಆರ್.ಎಸ್.ಚಕ್ರವರ್ತಿ ಸ್ವರ್ಣಪದಕ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸ್ವರ್ಣಪದಕ ಸೇರಿದಂತೆ ಇಂದುಮತಿ ಡಾ.ಪಾಟೀಲಪುಟ್ಟಪ್ಪ, ಡೆಕ್ಕನ್ ಹೆರಾಲ್ಡ್/ಪ್ರಜಾವಾಣಿ ನಗದು ಪುರಸ್ಕಾರಗಳನ್ನು ಕುಮಾರಿ ಸುಜಾತಾ ಜೋಡಳ್ಳಿಯವರು ಪಡೆದಿದ್ದಾಳೆ.

ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರಾವಾರ ಕಚೇರಿಯಲ್ಲಿ ಅಪ್ರೇಂಟಿಸ್ ಆಗಿ ತರಬೇತಿ ಪಡೆಯುತ್ತಿದ್ದಾಳೆ.

ಚಿನ್ನದ ಹುಡುಗಿ ಸುಜಾತಾ ಮಾತನಾಡಿ, ತಂದೆ, ತಾಯಿ ಹಾಗೂ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದಳು.

Leave A Reply

Your email address will not be published.